ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ದಶಪಥ ಅಲ್ಲ . ಅದು ಕೇಂದ್ರ ಸಚಿವ ಸಂಪುಟದಿಂದ ಕೇವಲ ಆರು ಪಥದ ರಸ್ತೆ ಯೋಜನೆಗಾಗಿ ಅನುಮತಿ ಪಡೆದುಕೊಂಡಿದೆ ಎಂದು ಯೋಜನಾ ನಿರ್ದೇಶಕ ಶ್ರೀಧರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಶ್ರೀಧರ್ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ದಶಪಥ ಅಲ್ಲ, ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿರುವುದು 6 ಪಥಕ್ಕೆ ಮಾತ್ರ ಎಂದಿದ್ದಾರೆ.
ಸರ್ವಿಸ್ ರಸ್ತೆಯಲ್ಲಿ ಎಲ್ಲರೂ ಹೋದರೆ ಟೋಲ್ ಕಟ್ಟುವುದು ಯಾರು? ಹಾಗಾಗಿ ಸರ್ವಿಸ್ ರಸ್ತೆ ಕಂಟಿನ್ಯೂಟಿ ಕೊಟ್ಟಿಲ್ಲ ಎಂದು ಶ್ರೀಧರ್ ವಿವಾದದ ಹೇಳಿಕೆ ನೀಡಿದ್ದಾರೆ.
ಹೆದ್ದಾರಿಯಲ್ಲಿ ಆರಂಭಿಸಿರುವ ಟೋಲ್ ಸಂಗ್ರಹ ವಿಚಾರಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಬಿ.ಟಿ.ಶ್ರೀಧರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು-ಮೈಸೂರು ಹೈವೇನಲ್ಲಿ ನಿನ್ನೆಯಿಂದ ಟೋಲ್ ಸಂಗ್ರಹ ಆರಂಭವಾಗಿದ್ದು, ವಾಹನ ಸವಾರರಿಂದ ಅಸಮಾಧಾನ ವ್ಯಕ್ತವಾಗಿದೆ.
ನಿನ್ನೆಯಿಂದ ಬೆಂಗಳೂರು-ಮೈಸೂರು ಹೈವೇಯಲ್ಲಿ ಟೋಲ್ ಸಂಗ್ರಹಿಸಲಾಗಿದ್ದು, ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. 55 ಕಿಲೋಮೀಟರ್ಗೆ 155 ರೂ. ಟೋಲ್ ನಿಗದಿಯಾಗಿದೆ. ಮತ್ತುಳಿದ 55 ಕಿಲೋಮೀಟರ್ಗೆ 155 ರೂ. ನಿಗದಿಪಡಿಸಲಾಗಿದೆ. ಅಲ್ಲಿಗೆ ಒಟ್ಟು 300 ರೂ. ಟೋಲ್ ಪಾವತಿಸಬೇಕು.ಇದನ್ನು ಓದಿ –ಷರತ್ತಿನೊಂದಿಗೆ 5 ಮತ್ತು 8 ನೇ ತರಗತಿ ‘ಪಬ್ಲಿಕ್ ಪರೀಕ್ಷೆ’ ನಡೆಸಲು ಹೈಕೋರ್ಟ್ ಅಸ್ತು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು