“ಬಾಳೆಗೆ ಒಂದೇ ಗೊನೆ ರಾಗಿಗೆ ಒಂದೇ ತೆನೆ”! ಎಂಬ ಮಾತಿನಂತೆ ಬಾಳೆಯು ನಮ್ಮ ಬದುಕಿನುದ್ದಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧ ಹೊಂದಿದೆ, ಆರೋಗ್ಯಕ್ಕೂ, ದೈವ ಆರಾಧನೆಗೂ ಬಾಳೆ ಬೇಕೆ ಬೇಕು.
ಬಾಳೆಗಿಡ ಎಂದ ತಕ್ಷಣ ನೆನಪಿಗೆ ಬರುವುದು ಬಾಳೆಹಣ್ಣು. ಪೂಜೆ ಪುನಸ್ಕಾರಗಳಲ್ಲಿ ಹೂವಿನ ಜೊತೆಗೆ ಬಾಳೆಹಣ್ಣನ್ನು ಇರಿಸಿ ನೈವೇದ್ಯ ಮಾಡುವುದು ಅತ್ಯಂತ ಶ್ರೇಷ್ಠ ಎಂದೇ ಭಾವಿಸಲಾಗುತ್ತದೆ.
ವರ್ಷವೂದ್ದಕ್ಕೂ ಹೂ ಬಿಟ್ಟು, ಹಣ್ಣು ಕೊಡುವ ಗಿಡವೆಂದರೆ ಅದು ಬಾಳೆಗಿಡ. ತುದಿಯಿಂದ ಬುಡದವರೆಗೆ ಉಪಯೋಗಕ್ಕೆ ಬರುವ ಗಿಡವೂ ಹೌದು. ಬಾಳೆಹಣ್ಣು ಮಾತ್ರವಲ್ಲ, ಬಾಳೆಗಿಡದಲ್ಲಿ ಪ್ರತಿಯೊಂದು ಉಪಯುಕ್ತವಾದುದು ಎಲೆಗಳು, ಬಾಳೆ ಹೂವು,ಬಾಳೆ ಕಾಯಿ, ಬಾಳೆ ಹಣ್ಣು, ಅದರ ಕಾಂಡ, ಬಾಳೆಯ ದಿಂಡು ಹೀಗೆ ಬಾಳೆಯ ಪ್ರತಿಯೊಂದು ಭಾಗವೂ ಸಹ ಮನುಷ್ಯರಿಗೆ ಒಳ್ಳೆಯ ರೀತಿಯಲ್ಲಿ ಉಪಯೋಗವಾಗುತ್ತದೆ.ಸಾಮಾನ್ಯವಾಗಿ ಬಾಳೆದಿಂಡಿನ ಮಧ್ಯದ ನಾರಿನ ತಿರುಳನ್ನು ಹೊರಗಡೆ ಸಿಪ್ಪೆ ತೆಗೆದು ತಿನ್ನಬಹುದು. ಆಗ ಇದರಲ್ಲಿರುವ ಫೈಬರ್ ಅಂಶ ಹೇರಳವಾಗಿ ನಮ್ಮ ದೇಹ ಸೇರುತ್ತದೆ.
ಕಣ್ಣೀರಿನ ಹನಿ ಆಕಾರದ, ಕೆಂಪು ಬಣ್ಣದ ನೇರಳೆ ಬಣ್ಣದಿಂದ ಕಾಣುವ ಹೂವು ಬಾಳೆಹಣ್ಣಿನ ಗುಂಪಿನ ಕೊನೆಯಲ್ಲಿ ಬೆಳೆಯುತ್ತದೆ. ಅವುಗಳನ್ನು “ಬನಾನಾ ಬ್ಲಾಸಮ್” ಅಥವಾ “ಬನಾನಾ ಹಾರ್ಟ್”, “ಲಫು-ಥಾರೋ”, “ಬಾಳೆ ಹೂ” “ಬಾಳೆ ಹೃದಯ” ಎಂದು ಕರೆಯುವ ಅತೀ ಉಪಯೋಗಿ ಸುಂದರವಾದ ಹೂವು ಸ್ತ್ರೀಯರ ಪಾಲಿಗಂತೂ ಸಂಜೀವಿನಿಯೇ ಎನ್ನಬಹುದು.
100 ಗ್ರಾಂ ಹೂವಿನಲ್ಲಿರುವ ಪೌಷ್ಟಿಕಾಂಶದ ಮೌಲ್ಯ – ಕ್ಯಾಲೋರಿಗಳು – 51 ಕೆ.ಸಿ.ಎಲ್ ಫೈಬರ್ – 5.7 ಗ್ರಾಂ, ಕಬ್ಬಿಣ – 56.4 ಮಿಗ್ರಾಂ, ಮೆಗ್ನೀಸಿಯಮ್ – 48.7 ಮಿಗ್ರಾಂ, ಪ್ರೋಟೀನ್ – 1.6 ಗ್ರಾಂ
, ಕೊಬ್ಬು – 0.6 ಗ್ರಾಂ, ಕಾರ್ಬೋಹೈಡ್ರೇಟ್ – 9.9 ಗ್ರಾಂ ಕ್ಯಾಲ್ಸಿಯಂ – 56 ಮಿಗ್ರಾಂ, ರಂಜಕ – 73.3 ಮಿಗ್ರಾಂ, ತಾಮ್ರ – 13 ಮಿಗ್ರಾಂ ಪೊಟ್ಯಾಸಿಯಮ್ – 553.3 ಮಿಗ್ರಾಂ ವಿಟಮಿನ್ ಇ – 1.07 ಮಿಗ್ರಾಂ.
ಎಷ್ಟೋ ಮಂದಿಗೆ ಪ್ರಬಲ ಪೋಷಕಾಂಶಗಳ ಅಗರವಾಗಿರುವ ಬಾಳೆಹೂವುವಿನ ಔಷಧೀಯ ಗುಣಗಳೇ ತಿಳಿದಿಲ್ಲ. ಬನ್ನಿ ಹಾಗಾದರೆ ಆಯುರ್ವೇದದಲ್ಲಿ ಔಷಧಿಯನ್ನಾಗಿ ಉಪಯೋಗಿಸುವ ಬಾಳೆ ಹೂವುಗಳ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.
1) ಬಾಳೆ ಹೂವುನ್ನು ನೈಸರ್ಗಿಕ ವಿಧಾನಗಳಲ್ಲಿ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಬಾಳೆಹೂವು ಎಥೆನಾಲ್ಅನ್ನು ಹೊಂದಿದ್ದು ನಮ್ಮ ದೇಹಕ್ಕೆ ಅತೀ ಹೆಚ್ಚು ಹಾನಿ ಉಂಟು ಮಾಡುವಂತಹ ಬ್ಯಾಸಿಲಸ್ ಸಬ್ಟಾಲಿಸ್, ಬ್ಯಾಸಿಲಸ್ ಸೆರಿಯಸ್ ಮತ್ತು ಎಸ್ಚೆರಿಚಿಯಾ ಕೋಲಿಯಂತಹ ಬ್ಯಾಕ್ಟೀರಿಯಾ ದಾಳಿಯನ್ನು ತಡೆಯುತ್ತದೆ.
2) ಬೇಯಿಸಿದ ಬಾಳೆ ಹೂವುಗಳು ಮಹಿಳೆಯರ ಮಾಸಿಕ ಹೊಟ್ಟೆ ನೋವನ್ನು ಉಪಶಮನ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಮೊಸರು ಅಥವಾ ಮಜ್ಜಿಗೆಯೊಂದಿಗೆ ಬಾಳೆ ಹೂವನ್ನು ಸೇವಿಸಿದಾಗ ಈ ಹೂವುಗಳು ದೇಹದಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ಅನ್ನು ಹೆಚ್ಚಿಸುತ್ತವೆ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.
3) “ಜರ್ನಲ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್‌ನಲ್ಲಿ” ಪ್ರಕಟವಾದ ಅಧ್ಯಯನದ ಪ್ರಕಾರ, ಬಾಳೆಹಣ್ಣಿನ ಸಾರವು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಮಧುಮೇಹಿಗಳು ಬಾಳೆ ಹೂಗಳನ್ನು ನಿಯಮಿತವಾಗಿ ಸೇವಿಸದಾಗ
ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆಲ್ಲದೆ
ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಿ ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ.
4) ಇದರಲ್ಲಿ ಫೈಬರ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಇದು ಹೊಟ್ಟೆಯ ಬೊಜ್ಜನ್ನು ಕರಗಿಸಿ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಾಳೆ ಹೂಗಳನ್ನು ಸಲಾಡ್ ಮತ್ತು ಸೂಪ್ ಮಾಡಿಕೊಂಡು ಸೇವನೆಮಾಡಿದಾಗ ತೂಕ ಕಡಿಮೆಯಾಗುತ್ತದೆ.
5) ಬಾಳೆ ಹೂವುಗಳಲ್ಲಿರುವ ಮೆಗ್ನೀಸಿಯಮ್ ಕಾರಣದಿಂದಾಗಿ ಆತಂಕ ಹಾಗೂ ಮನಸಿನ ಒತ್ತಡ ಕಡಿಮೆಯಾಗುತ್ತದೆ. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಖಿನ್ನತೆ ಹೋಗಲಾಡಿಸಿ ಮನಸ್ಸಿನ ಆರೋಗ್ಯವನ್ನು ಸುಧಾರಿಸುತ್ತದೆ.
6) ಎಳೆಯ ಬಾಳೆಹೂವನ್ನು ಆಹಾರದಲ್ಲಿ ಸೇರಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉರಿಯೂತ ಮತ್ತು ಮೂತ್ರದ ಸಮಸ್ಯೆಗಳ ಅಪಾಯವನ್ನು ತಪ್ಪಿಸಿ ಕಿಡ್ನಿ ಕಾರ್ಯವನ್ನು ಉತ್ತೇಜಿಸುತ್ತದೆ.
7) ಬಾಳೆಹಣ್ಣಿನ ಹೂವಿನ ಸೇವನೆಯಿಂದ ಹೃದಯಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆದು ಆಯಾಸ, ದಣಿವು, ಅನಿಯಮಿತ ಹೃದಯ ಬಡಿತ, ತೆಳು ಚರ್ಮ, ಶೀತ ಪಾದಗಳು ಮತ್ತು ಕೈಗಳಂತಹ ರಕ್ತಹೀನತೆಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಸುಧಾರಿಸುತ್ತದೆ.
8) ಬಾಳೆಹೂವು ಕ್ಷಾರೀಯ ಆಹಾರವಾಗಿದ್ದು ಅದು ಹೊಟ್ಟೆಯ ಆಮ್ಲ ಸ್ರವಿಸುವಿಕೆಯನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸಿ ಅಜೀರ್ಣ, ಹುಣ್ಣು ಮತ್ತು ನೋವಿನಿಂದ ಉಪಶಮನ ಮಾಡಲು ಸಹಾಯಮಾಡುತ್ತದೆ.
9) ಆಹಾರದ ಫೈಬರ್ ಮತ್ತು ಇತರ ಪ್ರಮುಖ ಪೋಷಕಾಂಶಗಳನ್ನು ಹೊಂದಿರುವ ಬಾಳೆ ಹೂವುಗಳು ನೈಸರ್ಗಿಕ ವಿರೇಚಕವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಕರುಳಿನ ಕಾರ್ಯಗಳನ್ನು ಕ್ರಮಬದ್ಧಗೊಳಿಸುತ್ತವೆ ಮತ್ತು ಮಲಬದ್ಧತೆಗೆ ಚಿಕಿತ್ಸೆ ನೀಡುತ್ತವೆ.
10) ಹೈಡ್ರೇಟಿಂಗ್ ಸಂಯುಕ್ತಗಳಿಂದ ತುಂಬಿರುವ ಬಾಳೆ ಹೂವುಗಳನ್ನು ಕೈಗಳ ಶುಷ್ಕತೆ ಮತ್ತು ಮಂದತೆಗೆ ಚಿಕಿತ್ಸೆ ನೀಡುವ ಕೈ ಕ್ರೀಮ್ ಮತ್ತು ಬಾಡಿ ಲೋಷನ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ.
11) ಬಾಳೆ ಹೂವನ್ನು ಪುಡಿ ಮಾಡಿ ದೈನಂದಿನ ಫೇಸ್ ಕ್ರೀಮ್, ಮಾಯಿಶ್ಚರೈಸರ್ ಇತ್ಯಾದಿಗಳೊಂದಿಗೆ ಬೆರೆಸಿ ಹಚ್ಚಿದಾಗ ಮುಖದಲ್ಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
12) ಬಾಳೆ ಹೂವಿನ ಹೇರ್ ಪ್ಯಾಕ್ ಬಳಸುವುದರಿಂದ ತಲೆಹೊಟ್ಟು ಕಮ್ಮಿಯಾಗಿ ಕೂದಲು ಉದುರುವಿಕೆಗೆ ಕಡಿಮೆಯಾಗುತ್ತದೆ. ಇದಲ್ಲದೆ, ಬಾಳೆಹಣ್ಣಿನ ಹೇರ್ ಪ್ಯಾಕ್ ಕೂಡ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.
ಬಾಳೆ ಹೂವನ್ನು ಸ್ವಚ್ಛಗೊಳಿಸುವಲ್ಲಿ ತೊಡಗಿರುವ ಕೆಲಸದಿಂದಾಗಿ ಅನೇಕರು ಬಾಳೆ ಹೂವುಗಳನ್ನು ಬಳಸುವುದಿಲ್ಲ, ಬಾಳೆಹೂವು ನೀಡುವ ಎಲ್ಲಾ ಪ್ರಯೋಜನಗಳನ್ನು ಪಡೆಯಲು ನಾವು ನಮ್ಮ ಮಕ್ಕಳನ್ನೂ ಅವರ ಚಿಕ್ಕ ವಯಸ್ಸಿನಿಂದಲೇ ಬಾಳೆಹೂವನ್ನು ತಿನ್ನಲು ಪ್ರೋತ್ಸಾಹಿಸಬೇಕು. ಬಾಳೆ ಹೂವಿನ ಅಡುಗೆ ಮಾಡಲು ಕಲಿತರೆ, ನಾವು ಅದರೊಂದಿಗೆ ತುಂಬಾ ರುಚಿಕರವಾದ ಭಕ್ಷ್ಯಗಳನ್ನು ಮಾಡಬಹುದು.ಬಾಳೆ ಹೂವುಗಳು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನು ನಿಯಮಿತವಾಗಿ ಸೇವಿಸಿದರೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಅನೇಕ ರೋಗಗಳಿಂದ ನಮ್ಮನ್ನು ತಡೆಯುತ್ತದೆ.
ಸೌಮ್ಯ ಸನತ್ ✍️.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ