ಬೆಂಗಳೂರು : ಕರ್ನಾಟಕದಲ್ಲಿ ನವೆಂಬರ್ 11ರಿಂದ ನವೆಂಬರ್ 14ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಲಿದ್ದಾರೆ.
ಈ ನಿರ್ಣಯವು ನವೆಂಬರ್ 13ರಂದು ಬಳ್ಳಾರಿ ಜಿಲ್ಲೆಯ ಸಂಡೂರು, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ.
ಈ ಬಾರಿ ಉಪಚುನಾವಣೆಗೆ 45 ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣೆ ಪ್ರಚಾರವು ತೀವ್ರಗತಿಯಲ್ಲಿ ಸಾಗುತ್ತಿದೆ. ಕಳೆದ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಮೂವರು ಶಾಸಕರು ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಮದ್ಯ ಮಾರಾಟ ನಿಷೇಧದ ವಿವರಗಳು
ಮದ್ಯ ಮಾರಾಟ ನಿಷೇಧವು ಈ ಮೂವರು ಕ್ಷೇತ್ರಗಳ ವ್ಯಾಪ್ತಿಗೆ ಮಾತ್ರ ಅನ್ವಯವಾಗುತ್ತಿದ್ದು, ಸಂಡೂರು ಕ್ಷೇತ್ರದಲ್ಲಿ ಮದ್ಯ ಮಾರಾಟ ನಿಷೇಧದ ಆದೇಶವನ್ನು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೊರಡಿಸಿದ್ದಾರೆ. ಸಂಡೂರು, ಕಂಪ್ಲಿ, ಕುರುಗೋಡು, ಮತ್ತು ಬಳ್ಳಾರಿ ತಾಲ್ಲೂಕಿನ 5 ಕಿ.ಮೀ. ವ್ಯಾಪ್ತಿಯಲ್ಲಿ ನವೆಂಬರ್ 11ರ ಸಂಜೆ 6 ಗಂಟೆಯಿಂದ ನವೆಂಬರ್ 14ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಲಾಗಿದೆ.
ಈ ವೇಳೆ ಮದ್ಯ ಮಾರಾಟ ನಿಷೇಧವು ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಮತ್ತು ಅವುಗಳಿಗೆ ಹೊಂದಿಕೊಂಡು ಇರುವ ಪ್ರದೇಶಗಳಿಗೂ ಅನ್ವಯವಾಗುತ್ತದೆ. ಅಲ್ಲದೆ, ನವೆಂಬರ್ 23ರಂದು ಮತ ಎಣಿಕೆ ನಡೆಯುವ ವೇಳೆ ಮದ್ಯ ಮಾರಾಟ, ಸಂಗ್ರಹ, ಮತ್ತು ಸಾಗಾಟವು ಪುನಃ ನಿಷೇಧವಾಗಲಿದೆ.ಇದನ್ನು ಓದಿ –ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
ಚುನಾವಣೆ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 1951ರ ಪ್ರಜಾಪ್ರತಿನಿಧಿ ಕಾಯ್ದೆ, ಕಲಂ 135-ಸಿ ಹಾಗೂ 1967ರ ಕರ್ನಾಟಕ ಅಬಕಾರಿ ನಿಯಮಗಳ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.
More Stories
ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ