ಅಶ್ಲೀಲ ನೀಲಿ ವಿಡಿಯೋ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡ ಇದೆ. ಆ ರಾಜಕಾರಣಿ ಬಿಜೆಪಿಯವರಲ್ಲ. ಬೇರೆ ಪಕ್ಷದವರು. ಸಿಓಡಿ ಅಥವಾ ಸಿಬಿಐ ತನಿಖೆ ಆಗಬೇಕು. ಸಮಗ್ರವಾಗಿ ತನಿಖೆಗೆ ಸಿಎಂ ಕೂಡ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಸಚಿವ ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಭಾಲಚಂದ್ರ , ಹೆಚ್.ವೈ ಮೇಟಿ ರಾಜೀನಾಮೆ ಕೊಡುವ ವೇಳೆ ಸಂತ್ರಸ್ತ ಮಹಿಳೆ ದೂರು ನೀಡಿದ್ದರು. ಅದಕ್ಕೆ ಅವರು ರಾಜೀನಾಮೆ ಕೊಟ್ಟಿದ್ರು. ಇವಾಗ ರಮೇಶ್ ಜಾರಕಿಹೊಳಿ ಜೊತೆಗಿರುವ ಮಹಿಳೆ ಯಾರು ಅಂತನೇ ಗೊತ್ತಿಲ್ಲ. ಮಹಿಳೆ ವಿಡಿಯೋ ಫೇಕ್ ಆಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ಅಗತ್ಯತೆ ಇಲ್ಲ ಎಂದು ಬಾಲಚಂದ್ರ ಹೇಳಿದರು.
ಒಂದು ವೇಳೆ ಮುಂದೆ ಸಂತ್ರಸ್ತ ಮಹಿಳೆ ಬಂದು ದೂರು ನೀಡಿದಾಗ ರಾಜೀನಾಮೆ ಬಗ್ಗೆ ನೋಡೋಣ. ಇವಾಗ ಆ ಮಹಿಳೆ ದೂರು ನೀಡದೆ, ಬರೀ ಯಾರೋ ಒಬ್ಬ ಬಂದು ದೂರು ಕೊಟ್ರೆ ಹೇಗೆ? ಅದನ್ನು ದೂರು ಅಂತಲೂ ಪರಿಗಣಿಸಲು ಆಗುವುದಿಲ್ಲ. ಹೀಗಾಗಿ ನಾನಂತು ರಮೇಶ್ಗೆ ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದೇನೆ. ಇವತ್ತು ಮಧ್ಯಾಹ್ನ ಸಿಎಂರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡ್ತಾರೆ ಎಂದು ತಿಳಿಸಿದರು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ