ಐಪಿಎಲ್ 20-20ಯ 22 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 69 ರನ್‌ಗಳ ವಿಜಯ ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡ ಟಾಸ್ ಗೆದ್ದು ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎಸ್‌ಆರ್‌ಹೆಚ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ನಾಯಕ ಡಿ. ವಾರ್ನರ್ ಹಾಗೂ ಉಪನಾಯಕ ಜೆ. ಬೇರ್ಸ್ಟೋವ್ ಅವರ ಆರಂಭವೇ ಅದ್ಭುತವಾಗಿತ್ತು. ವಾರ್ನರ್ 40 ಎಸೆತಗಳಿಗೆ 52 ರನ್ ಗಳಿಸಿದರೆ, ಬೇರ್ಸ್ಟೋವ್ 55 ಎಸೆತಗಳಲ್ಲಿ 97 ರನ್ ಗಳಿಸಿ ತಂಡವನ್ನು ಗೆಲ್ಲಿಸುವಲ್ಲಿ ಸಫಲರಾದರು. ಪಂಜಾಬ್ ತಂಡದ ಬೌಲರ್‌ಗಳಾದ ಆರ್. ಬಿಷ್ಟೋಯಿ ಹಾಗೂ ಎ.ಸಿಂಗ್ ಅವರ ಬೌಲಿಂಗ್ ಕೆಲ ಹೊತ್ತಿನ ಕಾಲ ಎಸ್‌ಆರ್‌ಹೆಚ್ ತಂಡಕ್ಕೆ ದಿಗ್ಭಂದನ ಹಾಕಿತಾದರೂ ಅಷ್ಟೇನೂ ಪೈಪೋಟಿ ನೀಡಲಿಲ್ಲ. ಎಸ್‌ಆರ್‌ಹೆಚ್ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
201 ರನ್‌ಗಳ ಬೃಹತ್ ಮೊತ್ತದ ಹಿಂದೆ ಹೊರಟ ಪಂಜಾಬ್ ಅಂತಹ ಉತ್ತಮ ಪ್ರದರ್ಶನವನ್ನೇನೂ ನೀಡಲಿಲ್ಲ. ಪಂಜಾಬ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರು ತಲಾ 11 ಮತ್ತು 9 ರನ್ ಗಳಿಸಿ ಪೆವಿಲಿಯನ್ ಸೇರಿದರು. ಎನ್. ಪೂರನ್ ಅವರು 37 ಎಸೆತಗಳಲ್ಲಿ 77 ರನ್ ಗಳಿಸಿದರಾದರೂ ಅದು ತಂಡಕ್ಕೆ ಸಹಾಯಕವಾಗಲಿಲ್ಲ.ಎಸ್‌ಆರ್‌ಹೆಚ್ ತಂಡದ ಬೌಲರ್‌ಗಳಾದ ಅಹ್ಮದ್, ನಟರಾಜನ್ ಹಾಗೂ ಆರ್. ಖಾನ್ ಅವರು ಪಂಜಾಬ್ ಬ್ಯಾಟ್ಸ್‌ಮನ್‌ಗಳ ಬೆವರಿಳಿಸಿದರು.
ಪಂಜಾಬ್ ತಂಡ 16.5 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಪಂದ್ಯದಲ್ಲಿ ಸೋತಿತು.
More Stories
ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ