ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ಎಂಎಲ್‍ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವ ಸೋಮಶೇಖರ್ ಅವರು, ಬಾಬು ಹೆಂಡತಿ, ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಬು ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಠಾಣೆಯೊಂದರಲ್ಲಿ ಎಫ್‍ಐಆರ್ ದಾಖಲಾಗಿದೆ. ಇಂತಹವರಿಗೆ ಕಾಂಗ್ರೆಸ್‍ನವರು ಟಿಕೆಟ್ ಕೊಟ್ಟಿದ್ದಾರೆ ಎಂದರು
ಇಂತಹ ಪ್ರಕರಣಗಳನ್ನು ನೋಡಿ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಅತ್ಯಾಚಾರ ಮಾಡಿದ್ದಾರೆ ಎಂಬುವುದಕ್ಕೆ ಎಫ್‍ಐಆರ್ ದಾಖಲಾಗಿರುವುದು ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿದರು
ಡಿಸೆಂಬರ್ 2 ಅಥವಾ 3 ಬೆಂಗಳೂರಿನ ಎಲ್ಲಾ ಶಾಸಕರು, ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ನಾನು ಹೇಳಿರುವುದು ಯಾವುದೂ ಸುಳ್ಳಲ್ಲ ಎಂದು ಹೇಳಿದರು
ಬಾಬು ಹಿಂದೆ ಇರುವ ಡೆವಲಪರ್ಸ್ ಯಾರು? ಎಷ್ಟು ಹಣ ಕೊಟ್ಟಿದ್ದಾರೆ ಎಂದು ನಮ್ಮ ಬಳಿ ಸಾಕ್ಷ್ಯಗಳಿದೆ. ಆತ 1,700 ಕೋಟಿಯನ್ನು ಡಿಕ್ಲೇರ್ ಮಾಡಿದ್ದಾನೆ. ಡಿಸಿಪಿಗೆ ಫೋನ್ ಮಾಡಿ ಅವನ ಹಿನ್ನೆಲೆಯನ್ನು ತೆಗೆದುಕೊಂಡಿದ್ದೇನೆ.
1,700 ಕೋಟಿ ಅಫಿಶಿಯಲ್ ಆಗಿ ತೋರಿಸಿದ್ದಾನೆ, ಅದರ ಎರಡರಷ್ಟು ಇದೆ. ಆತನ ಮೇಲೆ 40 ಕೇಸ್‍ಗಳಷ್ಟು ಎಫ್‍ಐಆರ್ ಇದೆ. 5 ಕೋಟಿಯಿಂದ 60 ಕೋಟಿವರೆಗೂ ಆತ ಫ್ರಾಡ್ ಮಾಡಿದ್ದಾನೆ. ಅವನನ್ನು 3 ಮೂರು ತಿಂಗಳು ಗಡಿಪಾರು ಮಾಡಿ, ಜೈಲಿನಲ್ಲೂ ಇಟ್ಟಿದ್ದೇವು ಎಂದು ಡಿಸಿಪಿ ಹೇಳಿದ್ದಾರೆ. ಇಂತಹವನನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಿದೆ. ಈ ಕೇಸ್‍ಗಳನ್ನು ನೋಡಿ ನನಗೆ ಗಾಬರಿಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು