ಮಥುರಾದ ರಾಮನರತಿ ಆಶ್ರಮದ ಗುರು ಶರಣಾನಂದ ಮಹಾರಾಜ್ ಹಾಗೂ ಶಿಷ್ಯ ವೃಂದದವರಿಗೆ ಆನೆಯ ಮೇಲೆ ಕುಳಿತುಕೊಂಡು ಯೋಗ ಪಾಠ ಹೇಳಿಕೊಡುತ್ತಿದ್ದ ಬಾಬ ರಾಮದೇವ್ ಕೆಳಕ್ಕೆ ಬಿದ್ದ ಘಟನೆಯ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗಿದೆ.
22 ಸೆಕೆಂಡ್‌ಗಳ ವಿಡಿಯೋದಲ್ಲಿ ಆನೆಯ ಮೇಲೆ ಕುಳಿತುಕೊಂಡು ಯೋಗ ತರಬೇತಿ ನೀಡುವಾಗ ನಿಯಂತ್ರಣ ಕಳೆದುಕೊಂಡ ಬಾಬಾ ಕೆಳಕ್ಕೆ ಬಿದ್ದಿದ್ದಾರೆ. ಆದರೆ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಬಿದ್ದ ತಕ್ಷಣ ಮೇಲೆದ್ದು ಕೆಲಕ್ಷಣಗಳ ವಿಶ್ರಾಂತಿ ಪಡೆದಿದ್ದಾರೆ. ನಂತರ ಯೋಗ ಪಾಠ ಮುಗಿಸಿ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ 18,400ಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದು ತಹರೇವಾರಿ ಕಮೆಂಟ್‌ಗಳು ಬಂದಿವೆ.
ಒಬ್ಬರು ಆನೆಗೆ ಸರಿಯಾದ ಯೋಗ ಕಲಿಸಲಿಲ್ಲ ಎಂದು ಬರೆದರೆ, ಇನ್ನೊಬ್ಬರು ಈ ವಯಸ್ಸಿನಲ್ಲೂ ಇವರ ಉತ್ಸಾಹ ಪ್ರಶಂಸನೀಯ ಎಂದು ಬರೆದಿದ್ದಾರೆ. ಮತ್ತೊಬ್ಬರು ಬಿದ್ದ ತಕ್ಷಣ ಅವರು ಮೇಲೆದ್ದು ನಿಂತಿದ್ದಾರೆ. ಅದು ರಾಮದೇವ್ ಅವರಿಂದ ಮಾತ್ರ ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ.
ಈ ಹಿಂದೆ ಆಗಸ್ಟ್‌ನಲ್ಲಿ ರಾಮದೇವ್ ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಜಾರಿ ಬಿದ್ದ ವಿಡಿಯೋ ಸಹ ಬಹಳ ವೈರಲ್ ಆಗಿತ್ತು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ