ಸಪ್ತ ಮೋಕ್ಷದಾಯಕ ನಗರಗಳಲ್ಲಿ ಅಯೋಧ್ಯೆ ಕೂಡ ಒಂದು. ಹಿಂದುಗಳ ಪವಿತ್ರ ಕ್ಷೇತ್ರ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮಭೂಮಿ. ಚಕ್ರವರ್ತಿ ಮನುವಿನಿಂದ ಅಯೋಧ್ಯ ನಗರ ಸ್ಥಾಪಿಸಲ್ಪಟ್ಟಿತು ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಯುದ್ಧದ ಪರಿಕಲ್ಪನೆಯನ್ನೇ ಈ ನಗರ ಕಾಣಬಾರದು ಎನ್ನುವ ಕಾರಣಕ್ಕೆ ಅಯೋಧ್ಯೆ ಎಂದು ಮನು ಚಕ್ರವರ್ತಿ ಹೆಸರನ್ನು ಇರಿಸಿದ. ಆದರೆ, ಅಯೋಧ್ಯೆ 76 ಯುದ್ಧಗಳಿಗೆ ಸಾಕ್ಷಿಯಾಯಿತು. ರಾಮಾಯಣದಲ್ಲಿ ಅಯೋಧ್ಯೆ ಶಾಂತಿರಿಯ ನಗರ ಎಂದು ಉಲ್ಲೇಖವಾಗಿದೆ.
ಸೂರ್ಯವಂಶದ ಶ್ರೇಷ್ಠ ಚಕ್ರವರ್ತಿ ದಿಲೀಪ ರಾಜನು ವಿಶ್ವಜಿತ್ ಯಜ್ಞವನ್ನು ಇಲ್ಲಿ ನಡೆಸಿದ ಎಂದು ಪುರಾಣ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.
ರಘು ವಂಶದ ರಾಜರ ಕಾಲದಲ್ಲಿ ಇದು ರಾಜಧಾನಿಯ ಕೀರ್ತಿ ಪಡೆಯಿತು. ವಶಿಷ್ಠ ಋಷಿಗಳ ಸೂಚನೆಯ ಮೇರೆಗೆ ದಶರಥ ಮಹಾರಾಜನು ಇಲ್ಲಿ ಋಷ್ಯಶೃಂಗರ ಮುಂದಾಳತ್ವದಲ್ಲಿ ಪುತ್ರಕಾಮೆಷ್ಠಿ ಯಜ್ಞವನ್ನು ಇಲ್ಲಿ ನಡೆಸಿದನು. ಸ್ವತಹ ಭಗವಂತನೇ ದಶರಥನ ಸುತನಾಗಿ ಬಂದು ರಾಮರೂಪದಲ್ಲಿ ಪುರುಷೋತ್ತಮ ಎನಿಸಿದ ಎಂಬ ಅಂಶವನ್ನು ಸ್ಮರಿಸಬಹುದು. ಅಯೋಧ್ಯೆಗೆ ಸಾಕೇತಪುರ ಎಂಬ ಇನ್ನೊಂದು ಹೆಸರು ಕೂಡ ಇದೆ.
ಅಜ ಮತ್ತು ಇಂದುಮತಿಯರ ವಿವಾಹವಾದ ಸ್ಥಳ ಇದಾಗಿದೆ. ದಶರಥ ಪುತ್ರಿ ಶಾಂತಾದೇವಿಯನ್ನು ವೃಷ್ಯಶೃಂಗರು ವರಿಸಿದರು ಎನ್ನುವ ಘಟನೆ ನಡೆದದ್ದು ಇದೇ ಅಯೋಧ್ಯಾಪುರದಲ್ಲಿ. ಭೂಮಿ ಸುತೆ ಸೀತೆಯು ಹೇಮ ದುಪ್ಪರಗಿಯಲ್ಲಿ ಅತ್ತೆಯರೊಂದಿಗೂ ಹಾಗೂ ಅರಮನೆಯ ಪರಿವಾರದವರೊಂದಿಗೂ ಸಂಭ್ರಮ ಮತ್ತು ಸಡಗರದಿಂದ ಕಾಲ ಕಳೆದ ಅಯೋಧ್ಯಾನಗರ ಒಂದು ಕಾಲದಲ್ಲಿ ವೈಭವದ ಸ್ಥಳವಾಗಿತ್ತು. ಸರಿಯು ನದಿಯ ತೀರದಲ್ಲಿ ವಿಶಾಲವಾಗಿ ಹರಡಿದ ಅಯೋಧ್ಯಾನಗರ ಗಂಗಾ ಯಮುನಾ ಸರಸ್ವತಿಯರೊಂದಿಗೆ ಸರಿಯು ಕೂಡ ಅಷ್ಟೇ ಪರಮ ಪವಿತ್ರ ನದಿಯಾಗಿ ಕಾಣಿಸಿದ್ದಾಳೆ. ಹಿಮಾಲಯದಲ್ಲಿ ಹುಟ್ಟಿ ದ ಕ್ಷಣಕ್ಕೆ ಧಾವಿಸಿ ಅಯೋಧ್ಯೆಯನ್ನು ಆರಂಭಿಸಿ ಹರಿದಿದ್ದಾಳೆ ಸರೆಯು. ಗಂಗೆ ವಿಷ್ಣುವಿನ ಪಾದದಿಂದ ಹರಿದವಳಾದರೆ ಸೆರೆಯು ಅವನ ಕಣ್ಗಳಿಂದ ಹೊರಟವಳು. ಇದಕ್ಕಾಗಿಯೇ ಸರಿಯು ನದಿಯನ್ನು ನೇತ್ರಾ ಎಂದು ಕೂಡ ಕರೆಯುತ್ತಾರೆ.
ಅಯೋಧ್ಯೆ ವಿಷ್ಣುವಿನ ಶಿರಭಾಗ ಎಂದು ಕರೆಯಲಾಗುತ್ತದೆ. ಅಯೋಧ್ಯ ಆಳಿದ ರಾಜರಲ್ಲಿ ಸತ್ಯಹರಿಶ್ಚಂದ್ರ ಅತ್ಯಂತ ಸೂಪ್ರಸಿದ್ಧ ರಾಜನಾಗಿದ್ದ. ವಿಶ್ವಾಮಿತ್ರನ ಸತ್ವ ಪರೀಕ್ಷೆಗೆ ಗುರಿಯಾಗಿ ಅಯೋಧ್ಯೆಯ ಅಧಿಕಾರವನ್ನು ಕಳೆದುಕೊಂಡ. ಆದರೆ, ತನ್ನ ಸತ್ಯನಿಷ್ಠೆಯ ಫಲವಾಗಿ ಮತ್ತೆ ರಾಜ್ಯನಾಗಿ ಪುರಾಣ ಪ್ರಸಿದ್ಧನಾದ. ಅಯೋಧ್ಯೆಯ ಅರಸರಾದವರಲ್ಲಿ ಪ್ರಭು ರಾಮಚಂದ್ರ 65ನೇ ಯವರು. ಮಹಾಭಾರತ ಕಾಲದಲ್ಲಿ ಬೃಹಬಾಹು ಅಯೋಧ್ಯೆಯ ರಾಜನಾಗಿದ್ದ. ಅವನು ಯುದ್ಧದಲ್ಲಿ ಅಭಿಮನ್ಯುವಿನ ಬಾಣಕ್ಕೆ ಪ್ರಾಣಬಿಟ್ಟ.ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ಶ್ರೀರಾಮನ ಕಾಲದಲ್ಲಿ ಅಯೋಧ್ಯೆಯು 12 ಯೋಜನೆ ಉದ್ದ ಮತ್ತು ಮೂರು ಯೋಜನೆ ಅಗಲದ ಮಹಾ ನಗರವಾಗಿತ್ತು. ಮಾರುಕಟ್ಟೆ ವಿಶಾಲವಾದ ರಾಜಭೀದಿಗಳು ದೊಡ್ಡ ದೊಡ್ಡ ಕಟ್ಟಡಗಳು ಬಲಿಷ್ಠ ಸೇನೆ ಹೀಗೆ ವೈಕುಂಠ ನಗರದ ಕಲ್ಪನೆಯನ್ನು ನಾಚಿಸುವ ರೀತಿಯಲ್ಲಿ ಅಯೋಧ್ಯೆ ಗಂಗೊಳ್ಳಿಸಿತು. ಸನಾತನ ಹಿಂದೂ ಸಂಸ್ಕೃತಿಯಲ್ಲಿ .. ಪುರಾಣಗಳಲ್ಲಿ.. ಅಯ್ಯೋದ್ಯೆಗೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿತ್ತು. ಹಿಂದುಗಳ ಶ್ರದ್ಧಾ ಕೇಂದ್ರವಾದ ಅಯೋಧ್ಯೆಗೆ ಈಗ ಮತ್ತೆ ಗತವೈಭವ ಬಂದಿದೆ. ಅನೇಕ ಏರಿಳಿತಗಳ ನಡುವೆ ಅಯೋಧ್ಯೆ ಮತ್ತೆ ಶ್ರೀರಾಮನ ಭಕ್ತರಿಗೆ ಪವಿತ್ರ ತೀರ್ಥಕ್ಷೇತ್ರವಾಗಿ ಹೊರಹೊಮ್ಮಿದೆ.
ಹನುಮೇಶ್ ಕೆ ಯಾವಗಲ್
ಹಿರಿಯ ಪತ್ರಕರ್ತರು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ