ಆಟೋ ಚಾಲಕನಾಗಿದ್ದ ಏಕನಾಥ್ ಸಿಂಧೆ ಈಗ ಮಹಾರಾಷ್ಟ್ರದ ಅಧಿಪತಿ. ಸಿಂಧೆ ರಾಜಕೀಯದ ಚದುರಂಗದ ಆಟ ರೋಚಕವಾಗಿದೆ.
ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಳಿಸಿದ ನಂತರ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.ಇದನ್ನು ಓದಿ –ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿಯಾಗಿ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ
ಇಂದು ರಾತ್ರಿಯಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಮುಂಬೈನ ಥಾಣೆ ಭಾಗದವರಾದ ಏಕನಾಥ ಶಿಂಧೆ ಹೊಟ್ಟೆಪಾಡಿಗಾಗಿ ಆಟೋ ಚಾಲನೆ ಮಾಡ್ತಾ ಇದ್ದವರು.
1980 ರಲ್ಲಿ ಬಾಳ್ ಠಾಕ್ರೆಯ ಅಪ್ಪಟ ಅಭಿಮಾನಿಯಾಗಿ ಶಿವಸೇನೆ ಸೇರ್ಪಡೆಯಾಗಿ, ಆ ಮೂಲಕ ರಾಜಕೀಯ ಎಂಟ್ರಿ. ಥಾಣೆ ಭಾಗದಲ್ಲಿ ಸಂಘಟನೆ ಮಾಡುತ್ತಾ ಮಾಸ್ ಲೀಡರ್ ಆಗಿ ಬೆಳವಣಿಗೆ ಸಾಧಿಸುತ್ತಾರೆ.
ಶಿವಸೇನೆ ಪಕ್ಷಕ್ಕೆ ಬಲ, ಠಾಕ್ರೆ ಕುಟುಂಬದ ಜೊತೆ ಆಪ್ತವಾಗಿ ಗುರುತಿಸಿಕೊಳ್ಳುತ್ತಾರೆ, ದೊಡ್ಡ ದೊಡ್ಡ ಸಭೆ ಸಮಾರಂಭಗಳ ಆಯೋಜನೆಯ ಜವಾಬ್ದಾರಿ ಹೊಣೆ. 1997 ರಲ್ಲಿ ಮುಂಬೈನ ಥಾಣೆ ಕಾರ್ಪೋರೇಟರ್ ಆಗಿ ಆಯ್ಕೆ. 2004 ರಲ್ಲಿ ಶಿವಸೇನೆಯಿಂದ ಕಲ್ಯಾಣ್ ಕ್ಷೇತ್ರದ ಎಂಎಲ್‌ಎ ಸ್ಥಾನಕ್ಕೆ ಸ್ಪರ್ಧೆ ಮಾಡಿ ಭರ್ಜರಿ ಗೆಲುವು ಸಾಧಿಸುತ್ತಾರೆ, ಅನಂತರ ನಾಲ್ಕು ಬಾರಿ ಸತತವಾಗಿ ಗೆಲುವು . 2014 ರಲ್ಲಿ ಶಿವಸೇನೆಯಿಂದ ಶಾಸಕಾಂಗ ಪಕ್ಷದ ನಾಯಕರಾಗಿಯೂ ಆಯ್ಕೆ . 2019 ರಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯಾದಾಗ ನಗರಾಭಿವೃದ್ಧಿ ಖಾತೆಯ ಜವಾಬ್ದಾರಿ . ಥಾಣೆ ಭಾಗದಲ್ಲಿ ಭಾರೀ ಪ್ರಭಾವಿ ಮರಾಠ ಮುಖಂಡರಾಗಿ ಗುರುತಿಸಿಕೊಳ್ಳುತ್ತಾರೆ.
ಒಂದು ಕಾಲದಲ್ಲಿ ಆಟೋ ಡ್ರೈವರ್ ಆಗಿ ಹೊಟ್ಟೆಪಾಡಿಗಾಗಿ ಕೆಲಸ ಮಾಡ್ತಾ ಇದ್ದವರು. ಶ್ರೀರಾಮನ ಜೊತೆ ಬಂಟನಾಗಿ ಹನುಮಂತ ಇರುವಂತೆ ಠಾಕ್ರೆ ಕುಟುಂಬದ ಜೊತೆ ಸಾಕ್ಷಾತ್ ಹನುಮಂತನಂತೆ ಶಿಂಧೆ ಇದ್ದರು.
ಶಿಂಧೆ ವಿರುದ್ದ 18 ಕ್ರಿಮಿನಲ್ ಕೇಸ್
ಸಿಎಂ ಏಕನಾಥ್ ಶಿಂಧೆ ವಿರುದ್ಧ ಬರೋಬ್ಬರಿ 18 ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಆದ್ರೆ ಒಂದರಲ್ಲೂ ಅವರು ಶಿಕ್ಷೆಗೆ ಗುರಿಯಾಗಿಲ್ಲ. ಒಂದು ಕೇಸಿನಲ್ಲೂ ಅವರು ಮೇಲ್ಮನವಿ ಹೋಗಿಲ್ಲ. ಸ್ವತಃ ಏಕನಾಥ ಶಿಂಧೆ ಚುನಾವಣೆ ವೇಳೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಶಿಂಧೆಯ ಕ್ರಿಮಿನಲ್ ಕೇಸುಗಳ ಸಂಕ್ಷಿಪ್ತ ವಿವರ ಉಲ್ಲೇಖವಾಗಿದೆ. ಬಹುತೇಕ ಕೇಸುಗಳು ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಟ್ಟಿರುವುದು, ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟವುಂಟು ಮಾಡಿರುವುದು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ