November 22, 2024

Newsnap Kannada

The World at your finger tips!

icc

2021 ರ ಟಿ ಟ್ವೆಂಟಿ ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ

Spread the love

2021 ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯು ಯು. ಎ. ಇ. ಯಲ್ಲಿ ಅಕ್ಟೋಬರ್ 17 ರಂದು ಆರಂಭವಾಗಲಿದೆ. ನವೆಂಬರ್ 14 ರಂದು ಫೈನಲ್ ಪಂದ್ಯದ ಮೂಲಕ ಅಂತ್ಯವಾಗಲಿದೆ. ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಪ್ರಕಟವಾದ ನಂತರ ಈಗ ಆಸ್ಟ್ರೇಲಿಯಾ ‌ಕೂಡ ತನ್ನ ಆಟಗಾರರ ತಂಡವನ್ನು ಪ್ರಕಟಿಸಿದೆ.

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೂ 2 ತಿಂಗಳು ಬಾಕಿ ಇರುವಾಗಲೇ ಐಸಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಯಾವ ತಂಡಗಳು ಯಾವ ತಂಡಗಳ ವಿರುದ್ಧ ಯಾವ ಗುಂಪಿನಲ್ಲಿ ಸೆಣಸಾಡಲಿವೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿದೆ.

ಲೀಗ್ ಹಂತಗಳ ಪಂದ್ಯಗಳಲ್ಲಿ ಯಾವ ತಂಡ ಯಾವ ತಂಡವನ್ನು ಸೋಲಿಸಿ, ಎಷ್ಟು ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಸೆಮಿಫೈನಲ್ ಪ್ರವೇಶಿಸಲಿದೆ ಮತ್ತು ಯಾವ ತಂಡ ಫೈನಲ್ ತಲುಪಲಿದೆ ಕುತೂಹಲ ಮೂಡಿದೆ.

ಆಸ್ಟ್ರೇಲಿಯಾದ 15 ಆಟಗಾರರ ತಂಡದ ವಿವರ:

ಆರನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್ (ಉಪ ನಾಯಕ), ಜೋಶ್ ಹೇಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ವೇಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆಡಮ್ ಜಂಪಾ.

ಮೀಸಲು ಆಟಗಾರರು : ಡೇನಿಯಲ್ ಕ್ರಿಶ್ಚಿಯನ್, ನಾಥನ್ ಎಲ್ಲಿಸ್ ಮತ್ತು ಡೇನಿಯಲ್ ಸ್ಯಾಮ್ಸ್

ಆಸ್ಟ್ರೇಲಿಯಾ ಪ್ರಕಟಿಸಿರುವ ಈ ತಂಡದಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್ ಕೀಪರ್‌ ಜೋಶ್ ಇಂಗ್ಲಿಸ್ ಸ್ಥಾನ ಪಡೆದುಕೊಳ್ಳುವುದರ ಮೂಲಕ ದೊಡ್ಡ ಮಟ್ಟದಲ್ಲಿ ಚರ್ಚೆಗೀಡಾಗಿದ್ದಾರೆ.

ಇತ್ತೀಚೆಗೆ ನಡೆದ ಬಿಗ್ ಬ್ಯಾಶ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡದ ಪರ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದ ಜೋಶ್ ಇಂಗ್ಲಿಸ್ ಪ್ರಸ್ತುತ ನಡೆಯುತ್ತಿರುವ ಟ್ವೆಂಟಿ ಬ್ಲಾಸ್ಟ್ 2021 ರ ಟೂರ್ನಿಯಲ್ಲಿ 531 ರನ್ ಬಾರಿಸುವುದರ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರನಾಗಿ ಮಿಂಚುತ್ತಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಬಲಿಷ್ಠ ಆಟಗಾರ ಜೋಶ್ ಇಂಗ್ಲಿಸ್ ಸ್ಥಾನ ಪಡೆದುಕೊಂಡಿರುವುದು ಕಾಂಗರೂಗಳಿಗೆ ಪ್ಲಸ್ ಪಾಯಿಂಟ್ ಆಗುವುದಂತೂ ಖಚಿತ.

ಟಿ ಟ್ವೆಂಟಿ ವಿಶ್ವಕಪ್ 2021ರಲ್ಲಿ ಆಸ್ಟ್ರೇಲಿಯಾದ ಪಂದ್ಯಗಳು :

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 12 ಹಂತದಲ್ಲಿ ಗ್ರೂಪ್ 1 ರಲ್ಲಿ ಆಸ್ಟ್ರೇಲಿಯಾ ಇದೆ.

ಸೂಪರ್ 12 ಹಂತದಲ್ಲಿ ಆಸ್ಟ್ರೇಲಿಯಾ ಯಾವ ತಂಡಗಳ ವಿರುದ್ಧ ಸೆಣಸಾಡಲಿದೆ. ಮಾಹಿತಿ ಇಲ್ಲಿದೆ.‌

  • ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ – ಅಕ್ಟೋಬರ್ 23, ಅಬುಧಾಬಿಯಲ್ಲಿ 3.30ಕ್ಕೆ
  • ಆಸ್ಟ್ರೇಲಿಯಾ vs ಎ1 – ಅಕ್ಟೋಬರ್ 28, ದುಬೈನಲ್ಲಿ ಸಂಜೆ 7.30ಕ್ಕೆ
  • ಆಸ್ಟ್ರೇಲಿಯಾ vs ಇಂಗ್ಲೆಂಡ್ – ಅಕ್ಟೋಬರ್ 30, ದುಬೈನಲ್ಲಿ ಸಂಜೆ 7.30ಕ್ಕೆ
  • ಆಸ್ಟ್ರೇಲಿಯಾ vs ಬಿ 2 – ನವೆಂಬರ್‌ 4, ಅಬುಧಾಬಿಯಲ್ಲಿ 3.30ಕ್ಕೆ
  • ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ – ನವೆಂಬರ್‌ 6, ಅಬುಧಾಬಿಯಲ್ಲಿ 3.30ಕ್ಕೆ.
Copyright © All rights reserved Newsnap | Newsever by AF themes.
error: Content is protected !!