January 14, 2026

Newsnap Kannada

The World at your finger tips!

WhatsApp Image 2024 10 02 at 9.59.56 AM

104ರನ್‌ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್

Spread the love

ಪರ್ತ್:ಪರ್ತ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಜಸ್‌ಪ್ರೀತ್ ಬೂಮ್ರಾ ತನ್ನ ನೇತೃತ್ವದ ಪಂದ್ಯದಲ್ಲಿಯೇ ಐದು ವಿಕೆಟ್‌ಗಳ ಅಮೋಘ ಸಾಧನೆ ಮಾಡಿ ಗಮನಸೆಳೆದಿದ್ದಾರೆ.

ಬೂಮ್ರಾ, ಈ ಸಾಧನೆಯೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಸಲ ಐದು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ದಾಳಿಯಿಂದ ಆಸ್ಟ್ರೇಲಿಯಾ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದೆ.

ಸಂಕಷ್ಟದಲ್ಲಿ ಆಸ್ಟ್ರೇಲಿಯಾ:
ತಾಜಾ ವರದಿಯ ಪ್ರಕಾರ, ಆಸ್ಟ್ರೇಲಿಯಾ 34 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ಕೇವಲ 79 ರನ್ ಗಳಿಸಿದ್ದು, ಇನ್ನೂ 71 ರನ್ ಗಳ ಇನಿಂಗ್ಸ್ ಮುನ್ನಡೆ ಅವಶ್ಯಕವಾಗಿದೆ.

ಭಾರತ 150 ರನ್‌ಗೆ ಆಲೌಟ್:
ಆಟದ ಮೊದಲ ದಿನ ಟೀಮ್ ಇಂಡಿಯಾ ಕೇವಲ 150 ರನ್‌ಗಳಿಗೆ ಆಲೌಟ್ ಆಯಿತು. ನಂತರ, ಆಸ್ಟ್ರೇಲಿಯಾ ಏಳು ವಿಕೆಟ್‌ ಕಳೆದುಕೊಂಡು 67 ರನ್ ಗಳಿಸಿತ್ತು. ಆಸ್ಟ್ರೇಲಿಯಾದ ಪರ ಜೋಶ್‌ ಹ್ಯಾಜಲ್‌ವುಡ್ (29ಕ್ಕೆ 4), ಮಿಚೆಲ್ ಸ್ಟಾರ್ಕ್ (14ಕ್ಕೆ 2), ಪ್ಯಾಟ್‌ ಕಮಿನ್ಸ್ (67ಕ್ಕೆ 2), ಮತ್ತು ಮಿಚೆಲ್ ಮಾರ್ಷ್ (12ಕ್ಕೆ 2) ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದರು.

ಮೊದಲ ದಿನ ಒಟ್ಟು 17 ವಿಕೆಟ್‌ಗಳು ಪತನಗೊಂಡವು. ಭಾರತದ ಪರ ಚೊಚ್ಚಲ ಪಂದ್ಯ ಆಡುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಗರಿಷ್ಠ 41 ರನ್ ಗಳಿಸಿದರು. ರಿಷಭ್ ಪಂತ್ 37 ಹಾಗೂ ಕೆ.ಎಲ್. ರಾಹುಲ್ 26 ರನ್ ಗಳಿಸಿದರು. ಆದರೆ ವಿರಾಟ್ ಕೊಹ್ಲಿ (5), ದೇವದತ್ತ ಪಡಿಕ್ಕಲ್ (0), ಧ್ರುವ್ ಜುರೇಲ್ (11), ಹಾಗೂ ವಾಷಿಂಗ್ಟನ್ ಸುಂದರ್ (11) ದೊಡ್ಡ ನಿರೀಕ್ಷೆ ಪೂರೈಸಲು ವಿಫಲರಾದರು.ಇದನ್ನು ಓದಿ –ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್‌ ಕುಮಾರಸ್ವಾಮಿ ಮುನ್ನಡೆ


ಟೀಮ್ ಇಂಡಿಯಾದ ಬೌಲಿಂಗ್ ದಾಳಿಯು ಆಡಳಿತ ಸಾಧಿಸಿದರೆ, ಮೊದಲು ಬ್ಯಾಟಿಂಗ್ ವೈಫಲ್ಯವು ಚಿಂತಾಜನಕವಾಗಿದೆ. ಪಂದ್ಯದ ಮುಂದಿನ ದಿನಗಳು ರೋಮಾಂಚಕವಾಗಿ ಮುಂದುವರೆಯುವ ನಿರೀಕ್ಷೆಯಿದೆ.

error: Content is protected !!