December 23, 2024

Newsnap Kannada

The World at your finger tips!

rd car

ಬೆಂಗಳೂರಿನಲ್ಲಿ ದುರ್ಘಟನೆ : ಆಡಿ ಕ್ಯೂ ಕಾರ್ ವಿದ್ಯುತ್ ಕಂಬಕ್ಕೆ ಡಿಕ್ಕಿ – 7 ಮಂದಿ ಸಾವು

Spread the love

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಐಷಾರಾಮಿ ಆಡಿ ಕ್ಯೂ 3 ಕಾರಿನಲ್ಲಿದ್ದ ಮೂವರು ಮಹಿಳೆಯರು ನಾಲ್ಕು ಪುರುಷರು ಸಾವಿಗೀಡಾಗಿದ ಘಟನೆ ಕಳೆದ ಮಧ್ಯರಾತ್ರಿ ನಂತರ ಸುಮಾರು 1 .30 ರ ವ ವೇಳೆಗೆ ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ಜರುಗಿದೆ.

ಈ ದುರಂತದಲ್ಲಿ ಕರುಣಾಸಾಗರ ಹಾಗೂ ಬಿಂದು ದಂಪತಿ, ಇಶಿತಾ, ಡಾ.ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಸಾವನ್ನಪ್ಪಿದ್ದಾರೆಂದು ಗುರುತಿಸಲಾಗಿದೆ.

ಎಂ. ಅಕ್ಷಯ್ ಗೋಯಲ್ ಕೇರಳಾ ಮೂಲದವರು, ಉತ್ಸವ್, ಹರಿಯಾಣ ಮೂಲದವರು. ರೋಹಿತ್, ಹುಬ್ಬಳ್ಳಿ, ಕರುಣಾ ಸಾಗರ್​ ಹೊಸೂರು ಮೂಲದವರು ಎಂದು ತಿಳಿದು ಬಂದಿದೆ.

ಉಳಿದವರು, ಕೋರಮಂಗಲದ ಜೋಲೋ ಸ್ಟೇ ಪಿ.ಜಿಯಲ್ಲಿ ವಾಸವಿದ್ದರು . ಸದ್ಯಕ್ಕೆ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತರಿಗೆ ಮರಣೋತ್ತರ ಪರೀಕ್ಷೆ‌ ನಡೆಲಿದೆ. ಮೃತರು ಮದ್ಯ ಸೇವನೆ ಬಗ್ಗೆ ಮರಣೋತ್ತರ ಪರೀಕ್ಷೆ ಬಳಿಕ ಮಾಹಿತಿ ಲಭ್ಯವಾಗಲಿದೆ.

ಘಟನೆ ನಡೆದದ್ದು ಹೇಗೆ ?

ಕೋರಮಂಗಲದ, ಮಂಗಳ ಕಲ್ಯಾಣಮಂಟಪದ ಬಳಿ ರಾತ್ರಿ 1:30ರ ಸುಮಾರಿಗೆ ವೇಗವಾಗಿ ಬಂದ ಆಡಿ ಕ್ಯೂ 3 ಕಾರ್​, ಫುಟ್ ಪಾತ್ ಮೇಲಿದ್ದ ಕಂಬಕ್ಕೆ ರಭಸವಾಗಿ ಢಿಕ್ಕಿ ಹೊಡೆದಿದೆ.

ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಆಡಿ ಕಾರು ಕಟ್ಟಡಕ್ಕೆ ಅಪ್ಪಳಿಸಿದ್ದು 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಿಕ್ಕ ಒಬ್ಬರನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ

ಆಡುಗೋಡಿ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!