January 9, 2025

Newsnap Kannada

The World at your finger tips!

svarna man

ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ –ಕೋಪ್ರೋದ್ರಿಕ್ತ ಗುಂಪಿನಿಂದ ಯುವಕನ ಹತ್ಯೆ

Spread the love

ಅಮೃತಸರದ ಸ್ವರ್ಣ ಮಂದಿರವನ್ನು ಅಪವಿತ್ರಗೊಳಿಸಲು ಯತ್ನಿಸಿದ ಆರೋಪ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಕೋಪ್ರೋದ್ರಿಕ್ತರು ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಪ್ರತಿನಿತ್ಯ ಸಂಜೆ ನಡೆಯುವ ಪ್ರಾರ್ಥನೆ ವೇಳೆ ರೇಲಿಂಗ್( ಕಬ್ಬಿಣದ ಸರಪಳಿಯನ್ನು) ದಾಟಿ, ಆ ಸ್ಥಳಕ್ಕೆ ಜಿಗಿದು ಬಂದ ವ್ಯಕ್ತಿಯೋರ್ವ ಗುರು ಗ್ರಂಥ ಸಾಹೀಬ್ (ಸಿಖ್ ಧರ್ಮದ ಪವಿತ್ರವಾದ ಗ್ರಂಥ) ಬಳಿ ಇರಿಸಲಾದ ಖಡ್ಗವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾನೆ.

ಈ ವೇಳೆ ಕರ್ತವ್ಯನಿರತ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಕೊಠಡಿಗೆ ಎಳೆದೊಯ್ದು ವಿಚಾರಣೆ ನಡೆಸಿ ತೀವ್ರವಾಗಿ ಥಳಿಸಿದ್ದಾರೆ.

ಇದರಿಂದ ಗಂಭೀರವಾಗಿ ಹಲ್ಲೆಗೆ ಒಳಗಾದ ವ್ಯಕ್ತಿ ಮೃತಪಟ್ಟಿದ್ದಾನೆ.
ಈ ಕೃತ್ಯ ಕುರಿತಂತೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (ಎಸ್‍ಜಿಪಿಸಿ) ಕಾರ್ಯನಿರ್ವಾಹಕ ಸದಸ್ಯ ಭಾಯಿ ಗುರುಪ್ರೀತ್ ಸಿಂಗ್ ರಾಂಧವಾ ಅವರು, ಅಮೃತಸಾರದ ಸ್ವರ್ಣ ಮಂದಿರದಲ್ಲಿ ನಡೆದ ಈ ಅಹಿತಕರವಾದ ಘಟನೆಯನ್ನು ನಾನು ಖಂಡಿಸುತ್ತೇನೆ. ಪಂಜಾಬ್ ಸರ್ಕಾರ ಈ ವಿಚಾರವಾಗಿ ತಕ್ಷಣವೇ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!