January 28, 2026

Newsnap Kannada

The World at your finger tips!

train3

ಮದುವೆ ಬೇಡಿಕೆ ತಿರಸ್ಕರಿಸಿದ ಯುವತಿಯನ್ನು ಚಲಿಸುವ ರೈಲಿನ ಬಳಿ ನೂಕಿ ಕೊಲೆಗೆ ಯತ್ನ

Spread the love

ಮದುವೆ ಬೇಡಿಕೆಯನ್ನು ತಿರಸ್ಕರಿಸಿದ್ದಕ್ಕೆ ಕೋಪಿಸಿಕೊಂಡ ವ್ಯಕ್ತಿಯೊಬ್ಬ ಯುವತಿಯನ್ನು ಚಲಿಸುತ್ತಿದ್ದ ರೈಲಿನ ಬಳಿಯೇ ಹಳಿಗೆ ಕೆಳಗೆ ನೂಕಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಮುಂಬೈನ ಖಾರ್ ನಿಲ್ದಾಣದಲ್ಲಿ ಈ ಕೃತ್ಯ ನಡೆದಿದೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಖಾರ್​​ ನಿವಾಸಿಯಾಗಿರುವ ಮಹಿಳೆಯ ತಲೆಗೆ ಬಲವಾದ ಏಟುಬಿದ್ದಿದೆ. 12 ಹೊಲಿಗೆ ಹಾಕಲಾಗಿದೆ ಅಂತಾ ವರದಿಯಾಗಿದೆ.

ಆರೋಪಿ ವ್ಯಕ್ತಿ ಹಾಗೂ ಮಹಿಳೆ ಕಳೆದ ಎರಡು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಉತ್ತಮ ಸ್ನೇಹ ಕೂಡ ಬೆಳೆದಿತ್ತು. ಆದರೆ ಇತ್ತೀಚೆಗೆ ಆರೋಪಿ ಕುಡಿತದ ದಾಸನಾಗಿದ್ದ. ಇದು ಆಕೆಗೆ ಗೊತ್ತಾಗಿದ್ದರಿಂದ ಅವನನ್ನು ದೂರ ಮಾಡಿದ್ದಳು ಎನ್ನಲಾಗಿದೆ. ಇದರಿಂದ ಕೋಪಿಸಿಕೊಂಡಿದ್ದ ಆರೋಪಿ ಪದೇ ಪದೇ ಮಹಿಳೆಗೆ ಕಾಟ ಕೊಡಲು ಆರಂಭಿಸಿದ್ದ. ಇದರಿಂದ ನೊಂದ ಮಹಿಳೆ ದೂರು ಕೂಡ ನೀಡಿದ್ದಳು.

ವ್ಯಕ್ತಿ ಆಕೆಯನ್ನು ಹಿಂಬಾಲಿಸಿ ಅಂಧೇರಿ ರೇಲ್ವೆ ನಿಲ್ದಾಣದಿಂದ ಖಾರ್​​ಗೆ ಬಂದಿಳಿದಿದ್ದಳು. ಆರೋಪಿ ಸುಮೇದ್.. ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುದಾಗಿ ಹೇಳಿ ಓಡಿ ಟ್ರ್ಯಾಕ್​ಗೆ ಹಾರಲು ಯತ್ನಿಸಿ ವಾಪಸ್ ಆಗಿದ್ದಾನೆ. ನಂತರ ಆ ಮಹಿಳೆಯನ್ನು ಹಿಡಿದು ಟ್ರ್ಯಾಕ್​ ಮೇಲೆ ಎಳೆದಾಡಿ ನೂಕಿದ್ದಾನೆ.‌

ಅಷ್ಟಕ್ಕೂ ಸುಮ್ಮನಾಗದ ಆರೋಪಿ ಆಕೆಯನ್ನು ಟ್ರ್ಯಾಕ್​ ಒಳಗೆ ತಳ್ಳಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಟ್ರೈನ್ ಕೂಡ ಅದೇ ಟ್ರ್ಯಾಕ್​ನಲ್ಲಿ ಪಾಸ್ ಆಗುತ್ತಿತ್ತು. ಸ್ವಲ್ಪ ಯಾಮಾರಿದ್ದರೂ ಆಕೆಯ ಪ್ರಾಣಕ್ಕೆ ಅಪಾಯ ಆಗುತ್ತಿತ್ತು. ತಲೆಗೆ ಗಾಯ ಮಾತ್ರ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!