ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಿಎಂ ರಿಲೀಫ್ ಫಂಡ್ ಖಾತೆಯಿಂದ 58 ಕೋಟಿ ರೂಪಾಯಿಗಳ ಹಣ ದೋಚಲು ಪ್ರಯತ್ನ ನಡೆದಿದೆ.
ಹಣವನ್ನು ದೋಚಲು ಮುಂದಾಗಿದ್ದು ತುಳು ಚಿತ್ರರಂಗದ ನಿರ್ದೇಶಕ, ಮಂಗಳೂರಿನ ಉದಯ ಶೆಟ್ಟಿ, ಬ್ರಿಜೇಶ್ ರೈ, ಮೂಡುಬಿದಿರೆಯ ಯೋಗೀಶ್ ಆಚಾರ್ಯ, ಬೆಳ್ತಂಗಡಿಯ ಗಂಗಾಧರ ಸುವರ್ಣ ಮತ್ತು ಇನ್ನಿಬ್ಬರು. ಆರೋಪಿಗಳನ್ನು ಬಂಧಿಸಿರುವ ಪೋಲೀಸರು ಉಳಿದಿಬ್ಬರ ಹೆಸರನ್ನು ಹೇಳಲು ಪೋಲೀಸರು ಇಚ್ಛಿಸುತ್ತಿಲ್ಲ.
ನಡೆದದ್ದೇನು?
ಆರೋಪಿಗಳು ಒಂದು ತಂಡವನ್ನು ಕಟ್ಟಿಕೊಂಡು ಈ ದುಷ್ಕೃತ್ಯವನ್ನು ನಡೆಸಲು ಹೊಂಚು ಹಾಕಿದ್ದಾರೆ. ನಕಲಿ ಚೆಕ್‌ವೊಂದನ್ನು ಸೃಷ್ಠಿಸಿದ ಆರೋಪಿಗಳು, ಆಂಧ್ರ ಪ್ರದೇಶದ ಮುಖ್ಯಂಮತ್ರಿಯಾದ ಜಗನ್ ಮೋಹನ್ ರೆಡ್ಡಿಯವರ ರಿಲೀಫ್ ಫಂಡ್‌ನ ಚೆಕ್ ಎಂದು ಹೇಳಿ ಬರೋಬ್ಬರಿ 58 ಕೋಟಿಗಳ ಚೆಕ್‌ನ್ನು ದಕ್ಷಿಣ ಕನ್ನಡದ ಮೂಡುಬಿದ್ರೆಯ ಬ್ಯಾಂಕಿಗೆ ನೀಡಿದ್ದರು.
ಚೆಕ್‌ನ್ನು ಪರಿಶೀಲಿಸಿದ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು, ಅನುಮಾನಗೊಂಡು ಆಂಧ್ರ ಪ್ರದೇಶದ ಸಿಎಂ ಕಛೇರಿಗೆ ಫೋನ್ ಮಾಡಿ ಚೆಕ್ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಇದು ನಕಲಿ ಚೆಕ್ ಎಂದು ತಿಳಿದುಬಂದಿದೆ. ಕೂಡಲೇ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಪೋಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಆರೋಪಿಗಳು ಇದಕ್ಕೂ ಮೊದಲು ಇದೇ ರೀತಿಯ ಹಗರಣಗಳನ್ನು ಇದಕ್ಕೂ ಮುಂಚೆ ನಡೆಸಿದ್ದುದಾಗಿ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಪೋಲೀಸ್ ಮೂಲಗಳು ಹೇಳಿವೆ. ಇನ್ನೂ ಹೆಚ್ಚಿನ ತನಿಖೆಯನ್ನು ಪೋಲೀಸರು ಕೈಗೊಳ್ಳಲಿದ್ದಾರೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ