ಮಾಡೆಲ್ ಒಬ್ಬರು ಹೋಟೆಲ್ ಟೆರೇಸ್‍ನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ.
ಯುವತಿಯನ್ನು ಗುಂಗುನ್ ಉಪಾಧ್ಯಾಯ.ಈಕೆ ಓರ್ವ ಮಾಡೆಲ್ ಆಗಿದ್ದಾಳೆ . ಜೋಧ್‍ಪುರ ನಗರದ ನಿವಾಸಿಯಾಗಿದ್ದಾರೆ.
ಉದಯಪುರದಿಂದ ಜೋಧ್‍ಪುರಕ್ಕೆ ಆಗಮಿಸಿದ ಯುವತಿ ರಾತ್ರಿ ಜೋಧ್‍ಪುರದ ರತನಾಡ ಪ್ರದೇಶದ ಹೋಟೆಲ್ ಲಾಡ್ರ್ಸ್ ಇನ್‍ನ ಆರನೇ ಮಹಡಿಯಿಂದ ಜಿಗಿದಿದ್ದಾರೆ.
ಟೆರೇಸ್ ಮೇಲಿನಿಂದ ಜಿಗಿಯುವ ಮುನ್ನ, ಗುಂಗುನ್ ತಂದೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ, ತನ್ನನ್ನು ಕೊನೆಯದಾಗಿ ನೋಡುವಂತೆ ಮುಖವನ್ನು ತೋರಿಸಿದ್ದಾರೆ.
ಈ ವೇಳೆ ಗುಂಗುನ್ ಅವರ ತಂದೆ ಗಣೇಶ್ ಉಪಾಧ್ಯಾಯ ಅವರು ಕೂಡಲೇ ಪೊಲೀಸರಿಗೆ ಕಡೆ ಮಾಡಿ ಮಾಹಿತಿ ನೀಡಿದ್ದಾರೆ.
ನಂತರ ಗುಂಗುನ್ ಇರುವ ಸ್ಥಳ ಪತ್ತೆ ಹಚ್ಚಿದ ಪೊಲೀಸರು ಸ್ಥಳಕ್ಕೆ ಹೋಗುವ ಮುನ್ನವೇ ಹೋಟೆಲ್‍ನ ಆರನೇ ಮಹಡಿಯಿಂದ ಜಿಗಿದಿದ್ದಾರೆ.
ಇದೀಗ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೇ ಗುಂಗುನ್ ಅವರ ಕಾಲು ಮತ್ತು ಎದೆ ಮುರಿದು ಹೋಗಿದೆ. ಸಾಕಷ್ಟು ರಕ್ತಸ್ರಾವವಾಗಿದ್ದರಿಂದ ಇದೀಗ ಅವರಿಗೆ ವೈದ್ಯರು ರಕ್ತ ಕೊಡಿಸುತ್ತಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಾಡೆಲ್ ಗುಂಗುನ್ ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದು ಬಂದಿಲ್ಲ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ