ನ್ಯೂಸ್ ಸ್ನ್ಯಾಪ್.
ಮುಂಬೈ.
ಕೇವಲ ವ್ಯಂಗಚಿತ್ರ (ಕಾರ್ಟೂನ್) ಒಂದನ್ನು ವಾಟ್ಸ್ಯಾಪ್ ಮುಖಾಂತರ ಹಂಚಿಕೊಂಡಿದ್ದ ನಿವೃತ್ತ ಸೇನಾಧಿಕಾರಿ 66 ವರ್ಷದ ಮದನ್ ಶರ್ಮಾ ಎಂಬುವವರ ಮೇಲೆ ಶಿವಸೇನೆಯ ಕಾರ್ಯಕರ್ತರು ನಡು ಬೀದಿಯಲ್ಲೇ ಹಲ್ಲೆ ಮಾಡಿದ್ದಾರೆ.
ಉದ್ಧವ್ ಠಾಕ್ರೆ, ಶರದ್ ಪವಾರ್ ಹಾಗೂ ಸೋನಿಯಾ ಗಾಂಧಿ ಇರುವ ವಿಡಂಬನಾತ್ಮಕ ಚಿತ್ರವನ್ನು ಮದನ್ ಶರ್ಮಾ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಕಾರ್ಯಕರ್ತರು ಮದನ್ ಶರ್ಮಾ ಮನೆಗೆ ಹೋಗಿ, ಅವರನ್ನು ಹೊರಬರುವಂತೆ ಕರೆದು ಬೀದಿಯಲ್ಲೇ ಹಲ್ಲೆ ಮಾಡಿದ್ದಾರೆ ಎನ್ನುತ್ತಾರೆ ಕುಟುಂಬದವರು.
ಸಧ್ಯ ಅವರನ್ನು ಮುಂಬೈನ ಶತಾಬ್ಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣಿನ ಬಲಭಾಗಕ್ಕೆ ಪೆಟ್ಟು ಬಿದ್ದಿದೆ. ಚಿಕಿತ್ಸೆ ನೀಡಲಾಗುತ್ತದೆ. ಹಲ್ಲೆ ನಡೆಸಿದ ಕಮಲೇಶ ಕದಮ್ ಜಾಗೂ ಆತನ ೮ ಬೆಂಬಲಿಗರ ಮೇಲೆ ಪೋಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ