December 29, 2024

Newsnap Kannada

The World at your finger tips!

encounter 985669394 1567887062

ಪೋಲಿಸರ ಮೇಲೆ ಹಲ್ಲೆ ಮಾಡಿದ ಆರೋಪಿಯ ಕಾಲಿಗೆ ಗುಂಡೇಟು

Spread the love

ಪೋಲಿಸರ ಮೇಲೆ ಹಲ್ಲೆ ನಡೆಸಿದ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗಂಡು ಹಾರಿಸಿದ ಘಟನೆ ಮೈಸೂರಿನ ಬಿಳಿಕೆರೆಯಲ್ಲಿ ಜರುಗಿದೆ.
ಜಯಂತ್ ಎಂಬ ಆರೋಪಿಗೆ ಗುಂಡೇಟು ಬಿದ್ದ ಪರಿಣಾಮ ಆತನನ್ನು ಈಗ ಮೈಸೂರು ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆರೋಪಿ ಜಯಂತ್ ನಿಂದ ದೊಣ್ಣೆ ಏಟು ತಿಂದ ಮುಖ್ಯ ಪೇದೆ ರವಿ ಹಾಗೂ ಪೇದೆ ರವಿಕುಮಾರ್ ಅವರನ್ನು ಹುಣಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುಣಸೂರು ಬಳಿ ಜಯರಾಮನಹಳ್ಳಿ ಬಳಿ ಸಾರಿಗೆ ಬಸ್ ಚಾಲಕ ವೆಂಕಟೇಶ್ ಎಂಬುವವರು ತಮ್ಮ ವಾಹನ ಹೋಗಲು ಜಾಗ ಬಿಡಲಿಲ್ಲ ಎಂ ಕಾರಣಕ್ಕಾಗಿ ಈ ಜಯಂತ್ ಹಾಗೂ ಆತನ ಗೆಳೆಯರು ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದರು. ಈ ಸಂಬಂಧದ ವಿಡಿಯೋ ಸಾಕಷ್ಟು ವೈರಲ್ ಅಗಿತ್ತು.

a6854960 ebe2 4df5 96a1 9f8bc6ae622b

ಮೂವರು ಆರೋಪಗಳನ್ನು ಬಂಧನಕ್ಕೆ ಜಾಲ ಬೀಸಿದ್ದ ಪಿಎಸ್ಐ ಜಯಪ್ರಕಾಶ್ ತಂಡ ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಜಯಂತ್, ದೀಪಕ್ ಹಾಗೂ ವಿಘ್ನೇಶ್ ಈ ಮೂವರೂ ಇರುವ ಸುಳಿವು ಅರಿತು ಅಲ್ಲಿಗೆ ಬಂಧಿಸಿ ಕರೆ ತರುವಾಗ ಬಿಳಿಕೆರೆ ಬಳಿ ಮೂತ್ರ ವಿಸರ್ಜನೆ ಗೆ ಮಾಡುವ ನೆಪದಲ್ಲಿ ಕೆಳಗೆ ಇಳಿದ ಜಯಂತ್ ದೊಣ್ಣೆ ಯಿಂದ ಇಬ್ಬರು ಪೋಲಿಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪಿಎಸ್ಐ ಜಯಪ್ರಕಾಶ್ ಜಯಂತ್ ಕಾಲಿಗೆ ಗುಂಡು ಹಾರಿಸಿದರು.

ಈ ಆರೋಪಿ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನೆಂದು ಹೇಳಲಾಗಿದೆ.

Copyright © All rights reserved Newsnap | Newsever by AF themes.
error: Content is protected !!