December 25, 2024

Newsnap Kannada

The World at your finger tips!

crime,fraud,money

Another multi-crore bank fraud in Bangalore: Investors cheated in crores

ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

Spread the love

ಎಟಿಎಂ ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‍ನಿಂದ ಉಚಿತ ಮಿತಿಗಿಂತಲೂ ಹೆಚ್ಚು ಬಾರಿ ವಹಿವಾಟು ನಡೆಸಿದ್ದಲ್ಲಿ ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಆಕ್ಸಿಸ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‍ಗಳ ಉಚಿತ ಮಿತಿಗಿಂತ ಹೆಚ್ಚಿನ ವಹಿವಾಟಿನ ಶುಲ್ಕ 21 ರೂ. ಪ್ಲಸ್ ಜಿಎಸ್‍ಟಿ ಇರಲಿದೆ. ಈ ಹಿಂದೆ 20 ರೂ. ಇದ್ದ ಶುಲ್ಕ 21 ರೂ.ಗೆ ಏರಿಕೆಯಾಗಲಿದೆ.

ಹೊಸ ನಿಯಮ 2022 ರ ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ತಿಳಿಸಿದೆ.

ಆರ್‌ಬಿಐ ಜೂನ್‍ನಲ್ಲಿ ಮಾಸಿಕ ಮಿತಿಯನ್ನು ಮೀರಿದ ವಹಿವಾಟಿನ ಶುಲ್ಕವನ್ನು ಹೆಚ್ಚಳ ಗೊಳಿಸುವುದಾಗಿ ಘೋಷಿಸಿತ್ತು.

ಆರ್‌ಬಿಐ ಈ ಹಿಂದೆ ಹೊರಡಿಸಿದ ಸುತ್ತೋಲೆಯಲ್ಲಿ ಗ್ರಾಹಕರ ತಿಂಗಳಿನ ವಹಿವಾಟಿನ ಮಿತಿ ಹೆಚ್ಚಿದ್ದಲ್ಲಿ ಮುಂದಿನ ವಹಿವಾಟಿಗೆ 21 ರೂ. ಶುಲ್ಕವನ್ನು ವಿಧಿಸುವ ಬಗ್ಗೆ ತಿಳಿಸಿತ್ತು. ಈ ಹೊಸ ದರದ ಬದಲಾವಣೆ ಜನವರಿ 1 ರಿಂದ ಜಾರಿಗೆ ಬರಲಿದೆ.

Copyright © All rights reserved Newsnap | Newsever by AF themes.
error: Content is protected !!