January 29, 2026

Newsnap Kannada

The World at your finger tips!

naman veer1

ತಲೆಗೆ ಗುಂಡು ಹೊಡೆದುಕೊಂಡು ಕ್ರೀಡಾಪಟು ಆತ್ಮಹತ್ಯೆ

Spread the love

ರಾಷ್ಟ್ರಮಟ್ಟದ ಕ್ರೀಡಾಪಟು ಶೂಟರ್ ನಮನ್‌ವೀರ್ ಸಿಂಗ್ ಬ್ರಾರ್(28) ತಲೆಗೆ ಗುಂಡು ಹೊಡೆದುಕೊಂಡು ಮೊಹಾಲಿಯ ಸೆಕ್ಟರ್ 71ತಮ್ಮ ಮನೆಯಲ್ಲೇ ಮಂಗಳವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಮೇಲ್ನೋಟಕ್ಕೆ ಇದು ಅತ್ಮಹತ್ಯೆ ಎಂದು ತಿಳಿದುಬಂದಿದೆ. ಅಕಸ್ಮಿಕವಾಗಿ ಗುಂಡು ಹಾರಿದೆಯಾ ಎಂಬ ಕುರಿತೂ ತನಿಖೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿಯ ಬಂದ ನಂತರ ನಿಖರ ಮಾಹಿತಿ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.


ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದ ಜಾಗತಿಕ ವಿಶ್ವವಿದ್ಯಾಲಯಗಳ ಡಬಲ್ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ನಮನ್ ವೀರ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು.
ಐಎಸ್‌ಎಸ್‌ಎಫ್ ಅರ್ಹತಾ ಪರೀಕ್ಷೆಯಲ್ಲೂ ಅವರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

error: Content is protected !!