ಅ . 3 ರಂದು ಪ್ರಧಾನಿ ಮೋದಿ ಹಿಮಾಚಲ ಪ್ರದೇಶದ ರೋಹ್ಟಂಗ್‌ಪಾಸ್‌ನ ಅಟಲ್ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಿದ ಇಪ್ಪತ್ನಾಲ್ಕು ಗಂಟೆಗಳಲ್ಲಿ 3 ಅಪಘಾತಗಳು ಸಂಭವಿಸಿವೆ.
ಕುದುರೆ ಪಾದದ ಆಕಾರದಲ್ಲಿರುವ ಈ ಸುರಂಗ ಮಾರ್ಗದಲ್ಲಿ ಜನರು ಅಜಾಕರೂಕತೆಯಿಂದ ವಾಹನ ಚಲಾಯಿಸುವಿಕೆ ಹಾಗೂ ಮಾರ್ಗದ ಮಧ್ಯೆಯೇ ವಾಹನಗಳನ್ನು ನಿಲ್ಲಿಸಿ ಫೋಟೋಗಳನ್ನು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಿಕೆಯಿಂದ ಈ ಅಪಘಾತಗಳು ಸಂಭವಿಸಿವೆ.
ಅಟಲ್ ಸುರಂಗ ಮಾರ್ಗ ವಿಶ್ವದ ಅತೀ ಉದ್ದದ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಮಾರ್ಗವು 9.02 ಕಿಲೋಮೀಟರ್ ಉದ್ದವನ್ನು ಹೊಂದಿದೆ. 3,000 ಮೀಟರ್ ಅಥವಾ 10,000 ಅಡಿಯ ಎತ್ತರವನ್ನು ಈ ಸುರಂಗ ಹೊಂದಿದೆ. *
ಸುರಂಗ ಮಾರ್ಗವು ರಕ್ಷಣಾ ಇಲಾಖೆಯ ಅಂಗ ಸಂಸ್ಥೆಯಾದ ಗಡಿ ರಸ್ತೆ ಸಂಸ್ಥೆ(The Border Road Organisation)ಯ ನೇತೃತ್ವದಲ್ಲಿ 10 ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡಿದೆ.
ಗಡಿ ರಸ್ತೆ ಸಂಸ್ಥೆಯು ಈ ಮೂರೂ ಅಪಘಾತಗಳಿಗೆ ಸ್ಥಳೀಯ ಅಧಿಕಾರಿಗಳನ್ನು ಹಾಗೂ ಆಡಳಿತವನ್ನು ಆಪಾದಿಸಿದ ಬೆನ್ನಲ್ಲೇ 48 ಗಂಟೆಗಳೊಳಗಾಗಿ ಹಿಮಾಚಲ ಪ್ರದೇಶ ಸರ್ಕಾರವು ಅಲ್ಲಿ ಸಂಚಾರ ಪೋಲೀಸರನ್ನು ನಿಯಮಿಸದೆ.
ಗಡಿ ರಸ್ತೆ ಸಂಸ್ಥೆಯ ಮುಖ್ಯ ಎಂಜನೀಯರ್ ಕೆ.ಪಿ. ಪುರುಶೋತ್ತಮನ್ ‘ಸುರಂಗ ಮಾರ್ಗದ ಹತ್ತಿರ ಜನಗಳ ಹಾಗೂ ಪ್ರಯಾಣಿಕರ ಚಲನ-ವಲನಗಳನ್ನು ನಿಯಂತ್ರಣ ಮಾಡಲು ಪೋಲಿಸರ ಒಂದು ತುಕಡಿ ಇಡಬೇಕೆಂದು ಜುಲೈ 3 ರಂದು ಹಿಮಾಚಲದ ಪ್ರದೇಶದ ಮುಖ್ಯಮಂತ್ರಿಗಳ ಸಲಹೆಗಾರ ಮತ್ತು ಆಪ್ತಸಹಾಯಕನಿಗೆ ಮತ್ತು ಅಕ್ಟೋಬರ್ 3 ರಂದು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದರು. ಅಲ್ಲದೇ ಗಡಿ ರಸ್ತೆ ಸಂಸ್ಥೆ, ಸ್ಥಳೀಯ ನಾಗರೀಕ ಅಧಿಕಾರಿಗಳಿಗೆ ಸುರಂಗ ಮಾರ್ಗದ ಹತ್ತಿರ ಅಗ್ನಿಶಾಮಕ ಉಪಕರಣಗಳ ಠಾಣೆಯೊಂದನ್ನು ಸ್ಥಾಪಿಸುವಂತೆ ಕೇಳಿಕೊಂಡಿತ್ತು. ಆದರೆ ಅಲ್ಲಿನ ಆಡಳಿತಗಳು ಇದ್ಯಾವುದನ್ನೂ ಮಾಡಿಲ್ಲ.’ ಎನ್ನುತ್ತಾರೆ.
‘ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪ್ರಯಾಣಿಕರ ಅಜಾಗರೂಕತೆ ಮತ್ತು ಸೆಲ್ಫೀಗಳನ್ನು ತೆಗೆದುಕೊಳ್ಳಲು ಮಾರ್ಗದ ಮಧ್ಯೆಯೇ ವಾಹನ ನಿಲ್ಲಿಸುವುದು ಇವುಗಳೆಲ್ಲ ಅಪಘಾತಕ್ಕೆ ಕಾರಣವಾಗಿವೆ. ಸುರಂಗದ ಉದ್ಘಾಟನೆಯ ದಿನವೂ ಸಹ ಫೈರ್ ಇಂಜಿನ್‌ಗಳನ್ನು ನಿಲ್ಲಿಸುವಂತೆ, ಕಾವಲು ಸಿಬ್ಬಂದಿಯನ್ನು ಹಾಕಲು ಹೇಳಿದ್ದರೂ, ಅಲ್ಲಿನ ಆಡಳಿತಗಳು ಕಾವಲು ಸಿಬ್ಬಂದಿಯನ್ನು ಹಾಕಿರಲಿಲ್ಲ.’ ಎಂದು ಹೇಳಿದರು.
ಅಟಲ್ ಸುರಂಗ ಮಾರ್ಗದ ಮೂಲಕ ಪೆಟ್ರೋಲಿಯಮ್, ತೈಲ, ಹೊಗೆ ಹರಡಬಹುದಾಂತ ವಸ್ತುಗಳನ್ನು ಸಾಗಿಸಲು ಗಡಿ ರಸ್ತೆ ಸಂಸ್ಥೆ ಅನುಮತಿ ನೀಡಿಲ್ಲ. ಅಲ್ಲದೇ ಈಗ ಅಲ್ಲಿ ಓಡಾಡುವ ವಾಹನಗಳ ವೇಗವನ್ನು 80 ಕಿಲೋಮೀಟರ್‌ಗಳಿಗೆ ಮಾತ್ರ ಸೀಮಿತಗೊಳಿಸಿದೆ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ