January 10, 2025

Newsnap Kannada

The World at your finger tips!

sumalata punit

ಬಾಲ್ಯದಲ್ಲಿ ನಾನು ಸುಮಲತಾರನ್ನು ಮದ್ವೆ ಆಗ್ತೇನಿ ಅಂತಾ ಹೇಳ್ತಿದ್ದ ಈ ಅಪ್ಪು-ಸುಮಲತಾ ಕಣ್ಣೀರು

Spread the love

ಪುಟ್ಟ ಮಗುವಾಗಿದ್ದಾಗ ನೀನು ಯಾರನ್ನು ಮದ್ವೆ ಆಗುತ್ತೀಯಾ ಅಂದ್ರೆ ಸುಮಲತಾ ಅಂತಿದ್ದ ಈ ಅಪ್ಪುಎಂದು ಅಪ್ಪುವಿನ ಬಾಲ್ಯ ದಿನಗಳನ್ನು ಸಂಸದೆ ಸುಮಲತಾ ಸ್ಮರಿಸಿ ಕಣ್ಣೀರು ಹಾಕಿದರು.

ಅಪ್ಪು ನಿಧನ ನಮಗೆ ಮಾತ್ರ ಅಲ್ಲ ಇಡೀ ಕನ್ನಡ ಚಿತ್ರರಂಗಕ್ಕೆ ಇದುಬಹುದೊಡ್ಡ ಶಾಕಿಂಗ್​ ನ್ಯೂಸ್​​, ಬಹುದೊಡ್ಡ ನಷ್ಟ. ಪುನೀತ್​ ಇನ್ನಿಲ್ಲ ಅನ್ನೋದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ಇಲ್ವಾ ಎಂದರೇ ಅರ್ಥನೇ ಆಗ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್​ ಕಣ್ಣೀರಿಟ್ಟಿದ್ದಾರೆ.

ನಿನ್ನೆವರೆಗೂ ಎಲ್ಲ ಕಡೆ ಓಡಾಡಿಕೊಂಡಿದ್ದ ಅಪ್ಪು ಈಗ ಇಲ್ಲ ಎಂದರೇ ಹೇಗೆ ನಂಬಬೇಕು. ನಿನ್ನೆ ಭಜರಂಗಿ ಸಿನಿಮಾ ಪ್ರಮೋಷನ್​ನಲ್ಲಿ ಯಶ್​, ಶಿವರಾಜ್​ಕುಮಾರ್ ಜೊತೆ ಡ್ಯಾನ್ಸ್ ಮಾಡಿದನ್ನು ನೋಡಿದ್ದೆ ಎಂದು ಹೇಳಿದರು.

ಮೊದ ಮೊದಲು ರಾಜ್​ಕುಮಾರ್​ ಅವರೊಂದಿಗೆ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದೆ. ಆಗ ಪಾರ್ವತಮ್ಮ ಅವರೊಂದಿಗೆ 4 ವರ್ಷದ ಪುನೀತ್​ ಶೂಟಿಂಗ್​ಗೆ ಬರುತ್ತಿದ್ದ. ಆಗ ನನ್ನೊಂದಿಗೆ ತುಂಬಾ ಆತ್ಮೀಯನಾಗಿದ್ದ, ಶೂಟಿಂಗ್​ ಸೆಟ್​​ನಲ್ಲಿ ಕಣ್ಣಮುಚ್ಚಾಲೇ ಆಡೋದು, ಆಟ ಆಡೋದು ಎಲ್ಲವನ್ನು ಮಾಡುತ್ತಿದ್ದೇವು. ಆಗ ಮನೆಗೆ ಹೋಗಿ ನಾನು ಸುಮಲತಾರನ್ನೇ ಮದುವೆ ಆಗ್ತೀನಿ ಅಂತಾ ಅತ್ತು ಹಠ ಮಾಡಿದ್ದರಂತೆ. ಇದನ್ನು ರಾಜ್​​ಕುಮಾರ್ ಅವರೇ ನನಗೆ ಹೇಳಿದ್ದರು ಎಂದು ಸುಮಲತಾ ಕಣ್ಣೀರಿಟ್ಟರು.

Copyright © All rights reserved Newsnap | Newsever by AF themes.
error: Content is protected !!