December 23, 2024

Newsnap Kannada

The World at your finger tips!

grah

ಆಕಾಶದಲ್ಲಿ ಇಂದು ಸಂಜೆ ವಿಸ್ಮಯ: ಗುರು- ಶನಿ ಸಂಯೋಗ – ಬರಿಗಣ್ಣಲ್ಲಿ ನೋಡಿ – ಮಿಸ್ ಆದ್ರೆ 60 ವರ್ಷ ಕಾಯಬೇಕು

Spread the love

ಆಕಾಶದಲ್ಲಿ ಇಂದು ಸಂಜೆ 800 ವರ್ಷಗಳ ಬಳಿಕ ಅಪರೂಪದ ವಿದ್ಯಮಾನ ಸಾಕ್ಷಿಯಾಗಲಿದೆ
ಸೂರ್ಯಾಸ್ತದ ನಂತರ ಗುರು, ಶನಿ ಗ್ರಹಗಳ ಸಂಗಮ ದೃಶ್ಯ ಬರಿಗಣ್ಣಿಗೆ ನೋಡುವ ಅವಕಾಶ ಸಿಗಲಿದೆ.

ಈ ಎರಡು ಗ್ರಹಗಳು ಕ್ರಿಸ್‍ಮಸ್ ಸ್ಟಾರ್ ರೀತಿಯಲ್ಲಿ ಕಾಣಲಿವೆ. ಈ ವಿಶೇಷಕ್ಕಾಗಿ ಮತ್ತೆ 60 ವರ್ಷಗಳ ಬಳಿಕವೇ.

ಗುರು-ಶನಿ ಸಂಯೋಗ:

ಈ ಎರಡು ಗ್ರಹಗಳು ಭೂಮಿಗೆ ನೇರವಾಗಿ ಒಂದೇ ರೇಖೆಯಲ್ಲಿ ಬರುವುದರಿಂದ ಒಂದೇ ಗ್ರಹದಂತೆ ಗೋಚರವಾಗುತ್ತವೆ. ಆದರೆ, ಗ್ರಹಗಳು ಒಂದರ ಹಿಂದೆ ಒಂದು ಇರಲಿದೆ. ಹಾಗಾಗಿ ಇದನ್ನು ಬಾಹ್ಯಾಕಾಶ ವಿಜ್ಞಾನಿಗಳು ಮಹಾ ಸಂಗಮ ಎಂದು ಕರೆಯುತ್ತಾರೆ.

ಒಂದೇ ರೇಖೆಯಲ್ಲಿ ಗುರು, ಶನಿ, ಚಂದ್ರ ಬರೋದರಿಂದ ಆಗಸದಲ್ಲಿ ತ್ರಿಕೋನಾಕೃತಿಯಲ್ಲಿ ಸಂಯೋಗ ಗೋಚರವಾಗುತ್ತದೆ. ಮುಂದೆ 2080ರಲ್ಲಿ ಈ ವಿದ್ಯಮಾನ ಘಟಿಸಲಿದೆ.

ಎಷ್ಟು ಗಂಟೆಗೆ ಸಮಾಗಮ: ಪಶ್ಚಿಮ ದಿಕ್ಕಿನಲ್ಲಿ ನೋಡಿ;

ಇಂದು ಸಂಜೆ 6 ಗಂಟೆ 15 ನಿಮಿಷದಿಂದ ರಾತ್ರಿ 8 ಗಂಟೆವರೆಗೆ ಗುರು-ಶನಿ ಸಂಯೋಗ ಕಾಣಬಹುದಾಗಿದೆ. ಸಂಜೆ ವೇಳೆ ಪಶ್ಚಿಮ ದಿಕ್ಕಿನಲ್ಲಿ ಗುರು-ಶನಿ ಸಂಯೋಗ ಕಾಣಸಿಗಲಿದೆ. 1 ಗಂಟೆ 45 ನಿಮಿಷಗಳ ಕಾಲ ಖಗೋಳ ವಿಸ್ಮಯವನ್ನು ಬರೀಗಣ್ಣಿನಿಂದ ನೋಡಬಹುದಾಗಿದೆ.
ಗುರು ಗ್ರಹದ ಪಕ್ಕದಲ್ಲಿ ಬಿಂದುವಿನ ರೀತಿಯಲ್ಲಿ ಶನಿ ಗೋಚರಿಸಲಿದೆ.

ಗುರು,ಶನಿ ಸಮಾಗಮ:

ಆಕಾಶಕಾಯಗಳ ಸಾಮೀಪ್ಯದ ವಿಶೇಷವೇ ಖಗೋಳ ವಿದ್ಯಮಾನ. 20 ವರ್ಷಗಳಿಗೊಮ್ಮೆ ಕಾಣುವ ವಿದ್ಯಮಾನವನ್ನ ಗ್ರೇಟ್ ಕಂಜಂಕ್ಷನ್ ಅಂತ ಕರೆಯುತ್ತಾರೆ. ಈ ಎರಡು ಗ್ರಹಗಳ ಅಂತರ 6.1 ಅರ್ಕ್ ಮಿನಿಟ್, ಅಂದ್ರೆ 0.1 ಡಿಗ್ರಿ ಇರುತ್ತೆ. ಹಿಂದೆ 1623ರಲ್ಲಿ ಈ ವಿದ್ಯಮಾನ ನಡೆದಿತ್ತು ಆದರೆ ಅದು ಗೋಚರಿಸಿರಲಿಲ್ಲ. ಅದಕ್ಕೂ ಹಿಂದೆ 1226 ರಲ್ಲಿ ಅದ್ರೆ 794 ವರ್ಷದ ಹಿಂದೆ ಗೋಚರಿಸಿತ್ತು. ಮತ್ತೊಮ್ಮೆ, 0.1 ಡಿಗ್ರಿ ಅಂತರದ ಸಮಾಗಮ ವೀಕ್ಷಿಸಲು 2080ರವರೆಗೆ ಕಾಯಬೇಕು. ಈ ವೈಶಿಷ್ಯವನ್ನು ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಸಮಾಗಮ 1 ಗಂಟೆ 45 ನಿಮಿಷ ಮಾತ್ರ ಕಾಣಸಿಗುತ್ತದೆ.

Copyright © All rights reserved Newsnap | Newsever by AF themes.
error: Content is protected !!