ನ್ಯೂಸ್ ಸ್ನ್ಯಾಪ್
ಅಸ್ಸಾಂ
ಅಸ್ಸಾಂನ ಬಾಚರ್ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿರುವ ಕೀರ್ತಿ ಜಲ್ಲಿಯವರು ಸ್ವತಃ ತಮ್ಮ ಮದೆವೆಗೇ ರಜೆಯನ್ನು ನಿರಾಕರಿಸಿದ್ದಾರೆ.
ಬಾಚರ್ ನಲ್ಲಿ ದಿನವೊಂದಕ್ಕೆ ಸರಾಸರಿ ೧೦೦ ಜನರಿಗೆ ಕರೋನಾ ಸೋಂಕು ದೃಡಪಡುತ್ತಿರುವ ಹಿನ್ನಲೆಯಲ್ಲಿ ಜನರಿಗೆ ಸಂಪೂರ್ಣ ಸೇವೆ ನೀಡುವ ಸಲುವಾಗಿ ಕೀರ್ತಿಯವರು ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.
ಹೈದರಾಬಾದ್ ನ ಮೂಲದವರಾದ ಕೀರ್ತಿಯವರು ತಮ್ಮ ಪೋಷಕರಿಗೆ ಕರೆ ಮಾಡಿ ತಾವು ಮದುವೆಗೆ ರಜೆ ಹಾಕಲಾಗುವದಿಲ್ಲ ಎಂದು ಹೇಳಿ ವರ ಆದಿತ್ಯ ಶಶಿಕಾಂತ್ ಅವರನ್ನು ಬಾಚರ್ ಗೇ ಕರೆಸಿಕೊಂಡು ಮದುವೆಯಾಗಿದ್ದರು. ಅಸ್ಸಾಂ ನಲ್ಲಿ ಬುಧವಾರ ಸಾರ್ವಜನಿಕ ರಜೆ ಇರುವದರಿಂದ ಅಂದೇ ಮದುವೆಯನ್ನು ಮಾಡಿಕೊಂಡಿದ್ದಾರೆ.
ಝೂಮ್ ಆ್ಯಪ್ ನ ಮುಖಾಂತರ ಸುಮಾರು ೮೦೦ ಜನ ಈ ಮದುವೆಗೆ ಹಾಜರಾಗಿದ್ದರು. ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ಸ್ವಹಿತಾಸಕ್ತಿಗೋಸ್ಕರ ಬಳಸಿಕೊಳ್ಳುವ ಇಂದಿನ ದಿನಗಳಲ್ಲಿ, ಜನಸೇವೆಗೆ ತಮ್ಮನ್ನು ತಾವೇ ಮುಡಿಪಾಗಿಡುವ ಇಂತಹ ಅಧಿಕಾರಿಗಳು ಎಲ್ಲರಿಗೂ ಮಾದರಿ.
ಕೀರ್ತಿಯವರು ಬಾಚರ್ ಜಿಲ್ಲೆಯ ಅಧಿಕಾರವನ್ನು ವಹಿಸಿಕೊಂಡಾಗಿನಿಂದಲೂ ಜಿಲ್ಲೆಯ ಆರೋಗ್ಯ, ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸಲು ಅವಿರತ ಶ್ರಮ ಪಡುತ್ತಿದ್ದಾರೆಂದು ವರದಿಯಾಗಿದೆ
More Stories
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ