December 25, 2024

Newsnap Kannada

The World at your finger tips!

ASI , Crime , Police

ASI's son shot dead after breaking into police house: Father and son admitted to hospital ಪೊಲೀಸರ ಮನೆಗೆ ನುಗ್ಗಿ ದರೋಡೆ- ASI ಪುತ್ರನಿಗೆ ಗುಂಡೇಟು: ಅಪ್ಪ - ಮಗ ಆಸ್ಪತ್ರೆಗೆ ದಾಖಲು

ಪೊಲೀಸರ ಮನೆಗೆ ನುಗ್ಗಿ ದರೋಡೆ- ASI ಪುತ್ರನಿಗೆ ಗುಂಡೇಟು: ಅಪ್ಪ – ಮಗ ಆಸ್ಪತ್ರೆಗೆ ದಾಖಲು

Spread the love

ಪೊಲೀಸ್ ಎಎಸ್ಐ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಮಹಿಳೆಯರನ್ನು ಕಟ್ಡಿ ಹಾಕಿ ಮನೆಯಲ್ಲಿದ್ದ ನಗನಾಣ್ಯ ಲೂಟಿ ಮಾಡಿದ್ದಲ್ಲದೆ, ಅಡ್ಡ ಬಂದ ಪೊಲೀಸ್ ಹಾಗೂ ಆತನ ಪುತ್ರನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಜರುಗಿದೆ.

ಬಾಗೇಪಲ್ಲಿ ಪೊಲೀಸ್ ಠಾಣೆಯ ಎಎಸ್ಐ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ದರೋಡೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಬಳಿಯ ಮುತ್ತಗದಹಳ್ಳಿ ನಿವಾಸಿಯಾದ ನಾರಾಯಣಸ್ವಾಮಿ ಕಳೆದ 8 ತಿಂಗಳ‌ ಹಿಂದೆಯಷ್ಟೇ ಪೇರೇಸಂದ್ರ ಗುಡಿಬಂಡೆ ಮಾರ್ಗದ ಮಂಜನಾಥ ಕಲ್ಯಾಮಂಟಪದ ಹಿಂಭಾಗ ಹೊಸ ಮನೆ ಕಟ್ಟಿಕೊಂಡು ವಾಸವಾಗಿದ್ದರು.ದಾಖಲೆ ಬರೆದ ವಿಶ್ವದ ಎತ್ತರದ ಕೆಂಪೇಗೌಡ ಪ್ರತಿಮೆ : ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ

ನಿನ್ನೆ ಬಾಗೇಪಲ್ಲಿ ಠಾಣೆಯಿಂದ ಕರ್ತವ್ಯ ಮುಗಿಸಿ ನಾರಾಯಣಸ್ವಾಮಿ ಪೇರೇಸಂದ್ರ ಕ್ರಾಸ್ ನಲ್ಲಿ ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದ ತನ್ನ ಮಗ ಶರತ್ ಜೊತೆಗೂಡಿ 8:30 ಗಂಟೆಗೆ ಮನೆಗೆ ಆಗಮಿಸಿದ್ದರು.

ಈ ವೇಳೆ ಮನೆಯ ಒಳಭಾಗದಿಂದ 4 ಮಂದಿ ಯುವಕರು ಹೊರ ಬಂದಿದ್ದನ್ನು ಕಂಡ ಎಎಸ್ಐ ನಾರಾಯಣಸ್ವಾಮಿ ಹಾಗೂ ಈತನ ಪುತ್ರ ಶರತ್ ಯಾರು ನೀವು ಅಂತ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಪರಾರಿಯಾಗಲು ಮುಂದಾದ ಅನುಮಾನಸ್ಫದವಾಗಿ ಕಂಡ ನಾಲ್ವರನ್ನು ತಡೆದು ಹಿಡಿಯಲು ಪ್ರಯತ್ನಿಸಿದ್ದಾರೆ. 4 ಮಂದಿಯಲ್ಲಿ ಓರ್ವ ಯುವಕ ಗನ್ ಮೂಲಕ ಶೂಟ್ ಮಾಡಿದ್ದಾನೆ, ಇದರಿಂದ ನಾರಾಯಣಸ್ವಾಮಿ ಪುತ್ರ ಶರತ್ ತೊಡೆ ಭಾಗಕ್ಕೆ ಬುಲೆಟ್ ತಗುಲಿದೆ. ಇನ್ನೂ, ಇದನ್ನು ತಡೆಯಲು ಹೋದ ನಾರಾಯಣಸ್ವಾಮಿ ತಲೆಗೆ ಕೈಯಿಂದ ಗನ್ ನಿಂದ ಹಲ್ಲೆ ಮಾಡಿದ್ದಾನೆ ತಲೆಗೆ ಗಂಭೀರ ಗಾಯವಾಗಿದೆ.‌

ಮನೆಯಲ್ಲಿ ಎಎಸ್ಐ ನಾರಾಯಣಸ್ವಾಮಿ ಪತ್ನಿ, ತಾಯಿ ಹಾಗೂ ಸೊಸೆ ಮೂವರು ಮಾತ್ರ ಇದ್ದರು. ಮನೆಗೆ ನುಗ್ಗಿರುವ ನಾಲ್ಕು ಮಂದಿ ಕಳ್ಳರು ಚಾಕು ಹಾಗೂ ಗನ್ ತೋರಿಸಿ ಮನೆಯಲ್ಲಿದ್ದ ಹೆಂಗಸರನ್ನು ಬೆದರಿಸಿದ್ದಾರೆ. ಹಗ್ಗದ ಮೂಲಕ ಕೈ ಕಾಲು ಕಟ್ಟಿ ಹಾಕಿ ಬಾಯಿಗೆ ಪ್ಲಾಸ್ಟರ್ ಹಾಕಿ ಕೂಗದಂತೆ ತಡೆ ಒಡ್ಡಿದ್ದಾರೆ. ಮನೆಯಲ್ಲಿದ್ದ ಬಿರುವುಗಳನ್ನು ಒಡೆದು ಹಾಕಿ ಅದರಲ್ಲಿದ್ದ ನಗನಾಣ್ಯ ಸೇರಿದಂತೆ ಮಹಿಳೆಯರ ಕತ್ತಿನಲ್ಲಿದ್ದ ಮಾಂಗಲ್ಯ ಸರಗಳನ್ನು ದೋಚಿಕೊಂಡು ಹೋಗಿದ್ದಾರೆ. ಇನ್ನೇನು ಕಳವು ಮಾಡಿಕೊಂಡು ಎಸ್ಕೇಪ್ ಆಗುವ ವೇಳೆ ಎಎಸ್ಐ ಹಾಗೂ ಪುತ್ರ ಶರತ್ ಮನೆಗೆ ಬಂದಿದ್ದು ಕಳ್ಳರು ಅಡ್ಡ ಸಿಕ್ಕಿದ್ದು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು ಗುಂಡು ಹಾರಿಸಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಘಟನೆ ನಂತರ ನಾರಾಯಣಸ್ವಾಮಿ ಹಾಗೂ ಮಗನ ಕೂಗಾಟ ಕೇಳಿ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇನ್ನೂ ಮನೆಯಲ್ಲಿ ಕೂಡಿ ಹಾಕಿದ್ದ ಮಹಿಳೆಯರ ಬಾಯಿಗೆ ಹಾಕಲಾಗಿದ್ದ ಪ್ಲಾಸ್ಟರ್ ತೆಗೆದು ಹಾಕಿ ಅವರನ್ನು ರಕ್ಷಣೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್​​ಪಿ ನಾಗೇಶ್ ಹಾಗೂ ಪೇರೇಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬ್ರಿಜಾ ಕಾರಿನಲ್ಲಿ ಬಂದ ನಾಲ್ವರು ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ನಾಕಾಬಂಧಿ ಹಾಕಿ ಸಿಸಿಟಿವಿಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಎಸ್ಐ ನಾರಾಯಣಸ್ವಾಮಿ ಸೇರಿ ಪುತ್ರ ಶರತ್ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ ಚಿಕ್ಕಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!