December 26, 2024

Newsnap Kannada

The World at your finger tips!

puneeth rajkumar ashwini puneethrajkumar

PRK production ನಲ್ಲಿ ಮಹಿಳಾ ನಿರ್ದೇಶಕಿಗೆ ಅವಕಾಶ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

Spread the love

ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಪಿ.ಆರ್.ಕೆ ಪ್ರೊಡಕ್ಷನ್ (PRK production) ಕಡಿಮೆ ಸಮಯದಲ್ಲೇ ಹತ್ತು ಚಿತ್ರಗಳನ್ನು ಪೂರೈಸಿದೆ.

ಈ ಸಂಭ್ರಮಕ್ಕಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾವನ್ನು ಘೋಷಿಸಿ, ಈ ಬಾರಿ ಅವರು ಮಹಿಳಾ ನಿರ್ದೇಶಕಿಗೆ ಅವಕಾಶ ನೀಡಿದ್ದಾರೆ.

ಪಿ.ಆರ್.ಕೆ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ 10ನೇ ಚಿತ್ರಕ್ಕೆ ‘ಆಚಾರ್ ಅಂಡ್ ಕೋ’ ಎಂದು ಹೆಸರಿಡಲಾಗಿದೆ.

ಈ ಚಿತ್ರಕ್ಕೆ ಸಿಂಧು ಶ್ರೀನಿವಾಸ್ ಎಂಬ ನವ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಿ.ಆರ್.ಕೆ ಬ್ಯಾನರ್  ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿಯ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿರ್ದೇಶಕರ ಚೊಚ್ಚಲು ಸಿನಿಮಾ ಇದಾಗಿದೆ.

ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ನಾನಾ ವಿಭಾಗಗಳಲ್ಲಿ ಬಹುತೇಕ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಿಂದುಮಾಲಿನಿ ಅವರ ಸಂಗೀತ ಸಂಯೋಜನೆ ಇದ್ದರೆ, ಕ್ರಿಯೇಟಿವ್ ಪ್ರೊಡ್ಯುಸರ್ ಡಾನ್ನಿಲಾ ಕೊರ್ರೆಯಾ, ಸ್ಟೈಲಿಸ್ಟ್ ಇಂಚರಾ ಸುರೇಶ್ ಇವರನ್ನೊಳಗೊಂಡಿದೆ ಚಿತ್ರತಂಡ.

ಸಿನಿಮಾಗಾಗಿ ವಿಶೇಷ ಕಥೆಗಾಗಿ 60ರ ದಶಕದಲ್ಲಿ ನಡೆದ ಘಟನೆಯನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ 60ರ ದಶಕದ ಬೆಂಗಳೂರನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಬಹುದಾಗಿದೆ.

Copyright © All rights reserved Newsnap | Newsever by AF themes.
error: Content is protected !!