January 29, 2026

Newsnap Kannada

The World at your finger tips!

dasaraelephant

ದಸರಾ ಆನೆಗಳ ತಂಡಕ್ಕೆ “ಅಶ್ವತ್ಥಾಮ’ನ ಪ್ರವೇಶ

Spread the love

ಈ ಬಾರಿಯ ಮೈಸೂರು ದಸರಾ ಆನೆಗಳ ಅರ್ಜುನ ನೇತೃತ್ವದ ತಂಡಕ್ಕೆ ಹೊಸ ಸದಸ್ಯನ ಸೇರ್ಪಡೆಯಾಗಿದೆ. ಅವನೇ “ಅಶ್ವತ್ಥಾಮ’. ಮಹಾಭಾರತದ ದ್ರೋಣಾಚಾರ್ಯರ ಮಗನ ಹಸರನ್ನೇ ಈ ಆನೆಗೆ ಇಡಲಾಗಿದೆ. ತಂಡದ ಹೊಸ ಆಕರ್ಷಣೆಯಾದ ಇವನ ಚರಿತ್ರೆಯೂ ಜೋರಾಗಿಯೇ ಇದೆ.


ನಾಲ್ಕು ವರ್ಷದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರದ ಸುತ್ತಮುತ್ತಲ️ ಕಾಡಿನಿಂದ ನಾಡಿನ ಸಮೀಪಕ್ಕೆ ಬಂದು ಸಾಕಷ್ಟು ಕಿರಿಕಿರಿ ಮಾಡುತ್ತಿತ್ತು ಈ ಪುಂಡಾನೆ. ಬೆಳೆದ ಬೆಳೆಗಳನ್ನು ತಿಂದು ತೇಗಿ ಹೋಗುತ್ತಿತ್ತು. ಗಾಬರಿಗೊಂಡಿದ್ದ ರೈತರು ಅರಣ್ಯ ಇಲಾಖೆಗೆ ದೂರುಗಳ ಸುರಿಮಳೆಗೈದಿದ್ದರು.


ಭಾರಿ ಗಾತ್ರದ, ಉದ್ದಯನ ದಂತ ಹೊಂದಿದ್ದ ಒಂಟಿ ಸಲ️ಗ ಇದು ಎಂಬ ಮಾಹಿತಿ ಅರಿತ ಅರಣ್ಯ ಇಲಾಖೆಯವರು ಕಾರ್ಯಾಚರಣೆ ಶುರುಮಾಡಿದರು. ಅಭಿಮನ್ಯು ನೇತೃತ್ವದಲ್ಲಿ ಅರ್ಜುನ ಸೇರಿ ಹಲ️ವು ಆನೆಗಳ ತಂಡದ ಸಹಾಯದೊಂದಿಗೆ ಈ ಒಂಟಿ ಸಲ️ಗನನ್ನು ಹಿಡಿಯುವಲ್ಲಿ ಯಶಸ್ವಿಯಾದರು.


ಆ ಅನೆಗೆ ಆಗ 30 ವರ್ಷ ವಯಸ್ಸು. ಇದನ್ನು ಪಳಗಿಸಿದರೆ ಭವಿಷ್ಯದಲ್ಲಿ ಅನುಕೂಲ️ಕ್ಕೆ ಬರಲಿದೆ ಎಂಬ ಯೋಚನೆ ಮೂಡಿದ್ದೇ ತಡೆ ಸ್ಥಳೀಯ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದು ಹರವೆ ಆನೆ ತರಬೇತಿ ಶಿಬಿ️ರಕ್ಕೆ ಕರೆತಂದರು. ಅಶ್ವತ್ಥಾಮ ಎಂದು ನಾಮಕರಣವೂ ಆಯಿತು.

3,500 ಕೆ.ಜಿ. ತೂಕ, 2.85 ಮೀ.ಎತ್ತರ ಮತ್ತು 3.46 ಮೀಟರ್ ಉದ್ದದ ಈ ಆನೆ ಅಂದು ಉಗ್ರಸ್ವರೂಪಿ. ಕಾಲ️ಚಕ್ರ ಉರುಳಿದಂತೆ “ಅವನೂ’ ಬದಲಾದ ಸೌಮ್ಯ ಸ್ವರೂಪನಾಗಿ. ಈ ಕಾರ್ಯಾಚರಣೆ ನಡೆದು ನಾಲ್ಕು ವಷಗಳೇ ಕಳೆದಿವೆ.

ಸಮತಟ್ಟಾದ ಬೆನ್ನು ಇರುವ ಕಾರಣ ದಸರೆಗೆ ಆಯ್ಕೆ ಮಾಡಲಾಗಿದೆ. ಅಂಬಾರಿ ಕಟ್ಟಲು ಈ ರೀತಿಯ ಬೆನ್ನು ಹೇಳಿಮಾಡಿಸಿದಂತಿರುವುದರಿಂದ ಭವಿಷ್ಯದಲ್ಲಿ ಇವನಿಗೆ ಚಿನ್ನದ ಅಂಬಾರಿ ಹೊರುವ ಭಾಗ್ಯವೂ ಸಿಗಬಹುದೇನೊ ಎಂಬ ವಿಶ್ವಾಸ ಮೂಡಿದೆ.

ಮೈಸೂರು ದಸರಾಗೆ ಪ್ರವೇಶಮಾಡಲಿರುವ “ಅಶ್ವತ್ಥಾಮ’ನಿಗೆ ಮಾವುತ ಶಿವು, ಕಾವಾಡಿ ಗಣೇಶ್ ಆತ್ಮೀಯರು. ಇವರ ಮಾತನ್ನು ಮೀರುವುದಿಲ್ಲವೆಂಬ ಹೆಗ್ಗಳಿಕೆ “ಆತನ’ದು.

error: Content is protected !!