ಇತ್ತೀಚಿಗೆ ಕೊರೋನ ಮಹಾ ಮಾರಿಗೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಸುಮಾ ಗಸ್ತಿ ಅವರಿಗೆ ರಾಜ್ಯಸಭಾ ಸದಸ್ಯೆ ಸ್ಥಾನ ನೀಡಲು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಸಿಗುತ್ತಿಲ್ಲ.
ದಿ.ಅಶೋಕ ಗಸ್ತಿ ಪಕ್ಷದ ಆಸ್ತಿಯಾಗಿದ್ದರು. ನಿಷ್ಠರಾಗಿದ್ದರು. ಅವರು ಅಕಾಲಿಕವಾಗಿ ತೀರಿ ಹೋದ ಕಾರಣ ಪಕ್ಷಕ್ಕೆ ಹೊಡೆತ ಬಿದ್ದಿತ್ತು. ಈಗ ರಾಜ್ಯಸಭಾ ಸ್ಥಾನವನ್ನು ದಿ.ಅಶೋಕ ಗಸ್ತಿ ಪತ್ನಿ ಸುಮಾ ಗಸ್ತಿ ಅವರಿಗೆ ನೀಡಬೇಕು” ಎಂದು
ಒತ್ತಾಯಿಸಿದ್ದಾರೆ.
ಸುಮಾ ಗಸ್ತಿ ಓದು, ಬರಹ ಬಲ್ಲವರಾಗಿದ್ದಾರೆ. ಪ್ರಚಲಿತ ರಾಜಕೀಯ ಗೊತ್ತು. ಇವರಿಗೆ ರಾಜ್ಯಸಭೆಗೆ ಆದ್ಯತೆ ನೀಡಿದರೆ, ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರನ್ನು ರಾಜ್ಯಸಭೆಗೆ ಕಳುಹಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
More Stories
KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ