December 24, 2024

Newsnap Kannada

The World at your finger tips!

reality show

ಸಂಖ್ಯಾ ತಜ್ಞ ಆರ್ಯವರ್ಧನ್​ ಕುಟುಂಬದ ಆಸ್ತಿ 5 ಸಾವಿರ ಕೋಟಿ ರು : ಬಿಗ್ ಬಾಸ್ ನಲ್ಲಿ ಬಹಿರಂಗ

Spread the love

‘ನಾನು ಚಿಕ್ಕ ವಯಸ್ಸಿಗೆ ಊರು ಬಿಟ್ಟು ಬಂದೆ. ನನಗೂ ಆಸ್ತಿ ಕೊಟ್ಟಿದ್ದಾರೆ. ನಾನು ಏನೂ ಕಷ್ಟಪಟ್ಟಿಲ್ಲ’ ಎಂದು ಆರ್ಯವರ್ಧನ್​ ಹೇಳಿದ್ದಾರೆ.

ವೂಟ್​ ಸೆಲೆಕ್ಟ್​ನಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಒಟಿಟಿ ಕನ್ನಡ ಶೋ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ.

ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್​ ಕೂಡ ಗಮನ ಸೆಳೆಯುತ್ತಿದ್ದಾರೆ. ಅವರು ಬಿಗ್​ ಬಾಸ್​ ಮನೆಗೆ ಹೋಗುವುದಕ್ಕೂ ಮುನ್ನವೇ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ.

ನಾನು ಯಾರು’ ಎಂಬ ಟಾಸ್ಕ್​ನಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ಹಿನ್ನೆಲೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ
ಆರ್ಯವರ್ಧನ್​ ತಮ್ಮ ಆಸ್ತಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಓದಿ – ಮೊಬೈಲ್​​ ಫೋನ್​​ ಬೇಡಿಕೆ : ಮನೆ ಬಿಟ್ಟು ಹೋಗಿದ್ದ ಯುವಕ ಶವವಾಗಿ ಪತ್ತೆ!

ಹಾಸನ ಮತ್ತು ಬೇಲೂರು ಮಧ್ಯೆ ನಮ್ಮದು 40 ಎಕರೆ ಜಮೀನು ಇದೆ. ಸುತ್ತಲೂ ಕಾಡು-ಬೆಟ್ಟ ಇದೆ. ಮೂರು ಕೆರೆ ಇದೆ. ಸುತ್ತ ಮುತ್ತ ಯಾವುದೇ ಮನೆ ಇಲ್ಲ.

ಇಂದು ಎಲ್ಲರೂ ಸಿಟಿಯಲ್ಲಿ ದುಡ್ಡು ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದವರು. ನಮಗೆ ಹಳ್ಳಿ ಎಂದರೆ ಬೋರು. ಸಾಕಷ್ಟು ಜಮೀನು ನಮಗೆ ಇದೆ. ನಾನು ಸುಳ್ಳು ಹೇಳಲ್ಲ. ನಮ್ಮ ಅಜ್ಜನ ಆಸ್ತಿ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಆರ್ಯವರ್ಧನ್​ ಹೇಳಿದ್ದಾರೆ.

bigboss

‘ನಾನು ಚಿಕ್ಕ ವಯಸ್ಸಿಗೆ ಊರು ಬಿಟ್ಟು ಬಂದೆ. ನನಗೂ ಆಸ್ತಿ ಕೊಟ್ಟಿದ್ದಾರೆ. ನಾನು ಏನೂ ಕಷ್ಟಪಟ್ಟಿಲ್ಲ. ನಾನು ಎಲ್ಲವನ್ನೂ ಚಾಲೆಂಜ್​ ಎಂದು ಸ್ವೀಕರಿಸುತ್ತೇನೆ. ಕೇಳಿದವರಿಗೆಲ್ಲ ನಾನು ದುಡ್ಡ ಕೊಟ್ಟಿದ್ದೇನೆ. ಅದು ಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು. ಚಿತ್ರರಂಗದ ದೊಡ್ಡ ದೊಡ್ಡ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ದುಡ್ಡು ಕೊಟ್ಟಿದ್ದೇನೆ’ ಎಂದಿದ್ದಾರೆ ಆರ್ಯವರ್ಧನ್​ . ಮೂರು ಬಾರಿ ದೆವ್ವವನ್ನು ನೋಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಕೆಲವು ಸ್ಪರ್ಧಿಗಳು ತಮ್ಮ ಖಾಸಗಿ ಜೀವನದ ನೋವಿನ ಕಥೆಯನ್ನು ಹೇಳಿಕೊಂಡು ಸಿಂಪಥಿ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಆರ್ಯವರ್ಧನ್​ ಅವರ ಆರೋಪ. ‘ಯಾವ ದುಃಖವೂ ನನಗೆ ದುಃಖ ಎನಿಸುವುದಿಲ್ಲ. ಸವಾಲನ್ನು ಗೆಲ್ಲುವುದು ನಮ್ಮ ಧರ್ಮ. ಅಮ್ಮನಿಗೆ ಕಷ್ಟ ಬಂತು, ಅಪ್ಪನಿಗೆ ಕಷ್ಟ ಬಂತು ಎಂಬುದು ಸರಿಯಲ್ಲ. ಎಲ್ಲರ ಫ್ಯಾಮಿಲಿಯಲ್ಲೂ ಇದು ಇರುವಂಥದ್ದು. ಅತ್ತೆ-ಮಾವನನ್ನು ದೇವರ ಥರ ನೋಡಿಕೊಳ್ಳುತ್ತೇನೆ’ ಎಂದು ಆರ್ಯವರ್ಧನ್​ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!