ಆರ್ಯನ್ ಖಾನ್ ಬಳಿ ಡ್ರಗ್ಸ್ ಇರಲಿಲ್ಲ, ಡ್ರಗ್ಸ್ ಸೇವಿಸಿದ ಬಗ್ಗೆ ದಾಖಲೆ ಇಲ್ಲ. ಆದರೂ ಬಂಧಿಸಲಾಗಿದೆ. ಕೇಂದ್ರ ಸಚಿವರ ಮಗ ರೈತರನ್ನು ಕೊಂದರೂ ಇನ್ನೂ ಬಂಧಿಸಿಲ್ಲ ಯಾಕೆ ಎಂದು ನಟಿ , ಮಾಜಿ ಸಂಸದೆ ರಮ್ಯಾ ಪ್ರಶ್ನೆ ಮಾಡಿದ್ದಾರೆ
ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿರುವ ರಮ್ಯಾ ಬಿಜೆಪಿ ಸಚಿವರ ಮಗ 4 ರೈತರನ್ನು ಕೊಂದಿದ್ದಾರೆ. ಅವರ ಬಂಧನ ಯಾಕಿಲ್ಲ? ಅಲ್ಲದೆ ಮೃತ ರೈತರ ಕುಟುಂಬದವರನ್ನು ಭೇಟಿ ಮಾಡಲು ಹೊರಟಾಗ ಯಾವುದೇ ನೋಟಿಸ್ ಅಥವಾ ಮುನ್ಸೂಚನೆ ಇಲ್ಲದೆ ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆದಿರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟಿಕೆಯಿಂದ ದೇಶ ನಡೆಯುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಆರ್ಯನ್ ಖಾನ್ ಬಳಿ ಮಾದಕ ವಸ್ತು ಇದೆ, ಡ್ರಗ್ಸ್ ಸೇವಿಸಿದ್ದಾನೆ ಎಂದು ಎನ್‍ಸಿಬಿ ಎಲ್ಲೂ ಹೇಳಿಲ್ಲ. ಆದರೂ ಕಸ್ಟಡಿಗೆ ಪಡೆಯಲಾಗಿದೆ ಎಂದಿದ್ದಾರೆ.
ಎನ್‍ಸಿಬಿ ಆಯೋಜಕರಿಗೆ ಸುಲಭವಾಗಿ ವಾರೆಂಟ್ ಜಾರಿ ಮಾಡಬಹುದು, ವಿಚಾರಣೆಗೆ ಕರೆಯಬಹುದು. ಆದರೂ ಈ ವರೆಗೆ ಅದನ್ನು ಯಾಕೆ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ನ್ಯಾಯಾಲಯದಲ್ಲಿ ವಾಟ್ಸಪ್ ಚಾಟ್‍ಗಳನ್ನು ಪುರಾವೆಯಾಗಿ ಪರಿಗಣಿಸುವುದಿಲ್ಲ. ವಿಚಾರಣೆ ವೇಳೆ ಆರ್ಯನ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳುತ್ತಾರೆ. ಇದು ಸತ್ಯವಲ್ಲ, ಏಕೆಂದರೆ ಆರ್ಯನ್ ಒಪ್ಪಿಕೊಂಡಿರುವ ಕುರಿತು ಎಲ್ಲೂ ಬಹಿರಂಗವಾಗಿ ಹೇಳಿಲ್ಲ. ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಎನ್‍ಸಿಬಿ ಹೇಳುತ್ತಿದೆ. ಇದು ನಿಜವೇ ಆಗಿದ್ದರೆ ಎನ್‍ಸಿಬಿ ಕಾನೂನನ್ನು ಉಲ್ಲಂಘಿಸಿದಂತೆ.
ವಿಚಾರಣೆ ವೇಳೆ ದೀಪಿಕಾ ಪಡುಕೋಣೆ ಸಾಕಷ್ಟು ಬಾರಿ ಅತ್ತರು, ಆರ್ಯನ್ ಖಾನ್ ಅತ್ತಿದ್ದಾರೆ ಎಂಬ ಗಾಸಿಪ್ ಹರಡೋದು ಅವರಿಗೆ ಇಷ್ಟ ಎನಿಸುತ್ತದೆ. ವಿಚಾರಣೆ ವೇಳೆ ಅಧಿಕಾರಿಗಳನ್ನು ಹೊರತುಪಡಿಸಿ ಯಾರೂ ಇರುವುದಿಲ್ಲ. ಆದಾಗ್ಯೂ ಇದು ಮಾಧ್ಯಮಗಳಿಗೆ ಹೇಗೆ ಸಿಗುತ್ತದೆ ಎಂದು ರಮ್ಯಾ ಪ್ರಶ್ನಿಸಿದ್ದಾರೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ