ಯ್ಯೂ ಟ್ಯೂಬ್ ವಿಡಿಯೋ ನೋಡಿ ನಕಲಿ ನೋಟು ತಯಾರಿಕೆ ಮಾಡುತ್ತಿದ್ದ ದಾವಣಗೆರೆ ಮೂಲದ ಇಬ್ಬರು ಬಿಬಿಎಂ ಪದವೀಧರರನ್ನು ಉಡುಪಿಯ ಪೋಲೀಸರು ಬಂಧಿಸಿದ್ದಾರೆ.
ಚೇತನ್ ಗೌಡ ಹಾಗೂ ಅರ್ಪಿತಾ ನವಲೆ ಬಂಧಿತ ಆರೋಪಿಗಳು. ಇವರು ಮನೆಯಲ್ಲಿಯೇ ಯ್ಯೂ ಟ್ಯೂಬ್ ವಿಡಿಯೋಗಳ ಮೂಲಕ ನಕಲಿ ನೋಟನ್ನು ಮುದ್ರಿಸಿ ಅವುಗಳನ್ನು ಚಲಾವಣೆ ಮಾಡುವ ದಂಧೆಯನ್ನು ಶುರುವಿಟ್ಟುಕೊಂಡಿದ್ದರು.
ಉಡುಪಿಯಲ್ಲಿಯೂ ಸುಮಾರು 45 ದಿನಗಳಿಂದ 200 ರುಗಳ ನಕಲಿ ನೋಟುಗಳನ್ನು ಇವರು ಮುದ್ರಿಸುತ್ತಿದ್ದರು. ಇವರು ಮುದ್ರಿಸಿದ ನಕಲಿ ನೋಟನ್ನು ಪರೀಕ್ಷಾರ್ಥವಾಗಿ ಉಪಯೋಗಿಸಲು ಉಡುಪಿಯ ಅಂಗಡಿಯೊಂದರಲ್ಲಿ 50 ರೂ ಗಳ ವಸ್ತುವನ್ನು ಕೊಂಡುಕೊಂಡು 200 ರೂ ಗಳ ನಕಲಿ ನೋಟನ್ನು ಕೊಟ್ಟಿದ್ದಾರೆ. ನೋಟನ್ನು ಪರಿಶೀಲಿಸಿರುವ ಅಂಗಡಿಯ ಮಾಲೀಕ ಅನುಮಾನ ಬಂದು ಪೋಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ತಕ್ಷಣವೇ ಸ್ಥಳಕ್ಕಾಗಮಿಸಿದ ಪೋಲೀಸರು ಆರೋಪಿಗಳನ್ನು ಬಂಧಿಸಿ, ಎಸ್‌ಯುವಿ ವಾಹನ, ನಕಲಿ ಹಣ, ಪ್ರಿಂಟರ್ ಮತ್ತಿತ್ತರ ವಸ್ತುಗಳನ್ನು ವಶಕ್ಕೆಪಡೆದಿದ್ದಾರೆ. ದಾವಣಗೆರೆ, ಮೈಸೂರು, ಬೆಳಗಾವಿಯಲ್ಲಿ ಈಗಾಗಲೇ ಅವರು ನಕಲಿ ನೋಟು ಚಲಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು