ಕೊಟ್ಟಿಗೆಯಲ್ಲಿದ್ದ ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡು
ಹಿರಿಯೂರು ಗ್ರಾಮದ ನಾಗೇಶ್ (25) ಹಾಗೂ ಶಿವಪ್ರಸಾದ್ (48) ಎಂಬುವವರನ್ನು ಬಂಧಿಸಿದ್ದಾರೆ.
ಟಿ. ನರಸೀಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಅರೋಪಿಗಳು ತಾವು ಮಲಗಲು ಹಾಸಿಕೊಂಡಿದ್ದ ಹಾಸಿಗೆ ಪಕ್ಕದಲ್ಲಿ ರಟ್ಟಿನ ಬಾಕ್ಸ್ ನಲ್ಲಿ ಎಪ್ಸನ್ ಕಲರ್ ಪ್ರಿಂಟರ್ ಕಂಡುಬಂದಿದೆ. ಪೊಲೀಸರು ಇನ್ನಷ್ಟು ಪರಿಶೀಲನೆ ನಡೆಸಿದಾಗ ಈ ಕೃತ್ಯಕ್ಕೆ ಬಳಸುತ್ತಿದ್ದ ಎಲ್ಲ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನು ಓದಿ –ಬಜೆಟ್ 2025: 10 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ, 25% ಹೊಸ ತೆರಿಗೆ ಸ್ಲ್ಯಾಬ್ ಪ್ರಸ್ತಾಪ
ಪೊಲೀಸರು, ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಒಂದು ಕಪ್ಪು ಬಣ್ಣದ ಎಪ್ಸನ್ ಪ್ರಿಂಟರ್, ಕಪ್ಪು ಬಣ್ಣದ ಪೇಪರ್ ಮೇಜರ್ ಮೆಂಟ್ ಕಟಿಂಗ್ ಸ್ಕೇಲ್, ಒಂದು ಎ4 ಅಳತೆಯ ಗಾಂಧೀಜಿ ಭಾವಚಿತ್ರದ, ವಾಟರ್ ಮಾಕ್೯ ಮತ್ತು ನೋಟಿನ ಗೆರೆಯುಳ್ಳ ಬಿಳಿ ಬಣ್ಣದ ಹಾಳೆ, 4 ಕಲರ್ ಇಂಕ್ ಬಾಟಲ್ ಗಳು, ಎ4 ಸೈಜ್ ಅಳತೆಯ ಬಿಳಿ ಹಾಳೆಗಳು ಸೇರಿದಂತೆ ಎಲ್ಲಾ ರೀತಿಯ ವಸ್ತುಗಳನ್ನು ಬಳಸಿಕೊಂಡು ನೋಟು ಪ್ರಿಂಟಿಂಗ್ ಗೆ ಆರೋಪಿಗಳು ಪಕ್ಕ ಪ್ಲಾನ್ ಮಾಡಿದ್ದರು. 25,500 ರೂ. ಮೌಲ್ಯದ 51 ಖೋಟಾ ನೋಟುಗಳನ್ನು ಕೂಡ ಪ್ರಿಂಟ್ ಮಾಡಿದ್ದು ಕಂಡು ಬಂದಿದೆ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು