ಬೆಂಗಳೂರು: ಉದ್ಯೋಗಿಗಳ ಪಿಎಫ್ ಹಣ ವಂಚನೆ ಪ್ರಕರಣದಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಈ ಪ್ರಕರಣದಲ್ಲಿ ಫಿಎಫ್ಓ ರಿಜಿನಲ್ ಕಮಿಷನರ್ ಷಡಕ್ಷರಿ ಗೋಪಾಲ ರೆಡ್ಡಿ, ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಅಕ್ಟೋಬರ್ 4ರಂದು ಈ ಬಂಧನ ವಾರೆಂಟ್ ಜಾರಿಯಾಗಿದ್ದು, ರಾಬಿನ್ ಉತ್ತಪ್ಪ ಪುಲಕೇಶಿ ನಗರ ನಿವಾಸಿಯಾಗಿರುವ ಕಾರಣ ಅಲ್ಲಿನ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಆರೋಪದ ವಿವರ:
ರಾಬಿನ್ ಉತ್ತಪ್ಪ ನಡೆಸುತ್ತಿರುವ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯು ತಮ್ಮ ಉದ್ಯೋಗಿಗಳ ಪಿಎಫ್ ಹಣ ಪಾವತಿಸಿಲ್ಲ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿದೆ.
ಕಂಪನಿಯು ಉದ್ಯೋಗಿಗಳ ಸಂಬಳದಿಂದ ಪಿಎಫ್ ಹಣ ಕಟ್ ಮಾಡಿಕೊಂಡು, ಅದನ್ನು ಪಿಎಫ್ ಖಾತೆಗೆ ಜಮಾ ಮಾಡದೇ 23 ಲಕ್ಷ ರೂಪಾಯಿಗಳನ್ನು ವಂಚಿಸಿರುವುದು ತಿಳಿದುಬಂದಿದೆ.ಇದನ್ನು ಓದಿ –ಚಳಿಗಾಲದ ಚರ್ಮದ ಆರೈಕೆ ಸಲಹೆಗಳು
ಈ ಪ್ರಕರಣದ ಪೂರಕ ತನಿಖೆ ಮುಂದುವರಿದಿದ್ದು, ಆರೋಪಿಗಳಿಗೆ ಹಾಜರಾತಿ ನೀಡಲು ಸೂಚಿಸಲಾಗಿದೆ.
More Stories
ಪ್ರತಿ ಗ್ರಾ.ಪಂ ಅಭಿವೃದ್ಧಿಗೆ 8-9 ಕೋಟಿ ರೂ. ಅನುದಾನ: ಸಚಿವ ಮಧು ಬಂಗಾರಪ್ಪ
ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್: ನಾಲ್ಕು ಉಗುರು ವಶಕ್ಕೆ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್