Main News

ಮಾಜಿ ನ್ಯಾಯಾಧೀಶ ಕರ್ಣನ್ ಬಂಧನ

ಹೈಕೋರ್ಟ್ ಮಾಜಿ ನ್ಯಾಯಾಧೀಶ ಸಿ.ಎಸ್. ಕರ್ಣನ್ ಅವರನ್ನು ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ನ್ಯಾಯಾಧೀಶರು ಮತ್ತು ನ್ಯಾಯಾಧೀಶರ ಪತ್ನಿಯರ ವಿರುದ್ಧ ಮಾಡಿದ ಅವಾಚ್ಯ ನಿಂದನೆಗಳಿಗೆ ಚೆನ್ನೈ ಸೈಬರ್ ಕ್ರೈಮ್ ಪೊಲೀಸರು ಬಂಧನ ಮಾಡಿದ್ದಾರೆ.

ಆರೋಪಗಳು ಏನು?

ಸಿ.ಎಸ್. ಕರ್ಣನ್ ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು, ನ್ಯಾಯಾಧೀಶರ ಪತ್ನಿಯರ ವಿರುದ್ಧ ಮಾನಹಾನಿಕರ ಮತ್ತು ಅಪಮಾನಕಾರಿ ಟೀಕೆಗಳನ್ನು ಮಾಡಿದ್ದಾರೆ.

ಅಕ್ಟೋಬರ್ 27 ರಂದು ಮದ್ರಾಸ್ ಹೈಕೋರ್ಟ್‌ನ ವಕೀಲರ ದೂರಿನ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸ್ ಸೈಬರ್ ಸೆಲ್ ಕರ್ಣನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಹಿರಿಯ ಅಧಿಕಾರಿಯೊಬ್ಬರು ಹೇಳಿದಂತೆ ಕರ್ಣನ್ ಮಹಿಳೆಯರ ವಿರುದ್ಧ ಅಪಮಾನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂಬ ಆರೋಪ ಹೊರಿಸಿ ಮದ್ರಾಸ್ ಹೈಕೋರ್ಟ್ ನ ಹಿರಿಯ ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಎ ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು.

ಈ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದ ಕಾರಣ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಜೈಲು ಶಿಕ್ಷೆ ಅನುಭವಿಸಿದ ಕರ್ಣನ್ :

ನಿವೃತ್ತ ನ್ಯಾಯಮೂರ್ತಿ ಕರ್ಣನ್ ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿದ್ದರು. ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಕರ್ಣನ್‌ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆರು ತಿಂಗಳ ಶಿಕ್ಷೆ ವಿಧಿಸಲಾಗಿತ್ತು.

ಘಟನಾವಳಿಗಳು:

1) ಅಂದಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಸುಪ್ರೀಂ ಕೋರ್ಟ್ ನ ಏಳು ನ್ಯಾಯಾಧೀಶರ ಪೀಠವು ಪಶ್ಚಿಮ ಬಂಗಾಳ ಪೊಲೀಸ್ ಮುಖ್ಯಸ್ಥರಿಗೆ ಕರ್ಣನ್‌ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಂಡಿತ್ತು.

2) ಕೆಲವು ವಾರಗಳ ಕಾಲ ನಾಪತ್ತೆಯಾಗಿದ್ದ ಅವರನ್ನು, ಮೊಬೈಲ್ ಫೋನ್ ಟ್ರಾಪ್ ಮಾಡಿ ಪತ್ತೆ ಹಚ್ಚಲಾಗಿತ್ತು.

3) ಕರ್ಣನ್‌ ಸುಪ್ರೀಂ ಕೋರ್ಟ್‌ಗೆ ವಿಚಾರಣೆಗೆ ಹಾಜರಾದ ಮೊದಲ ಸಿಟ್ಟಿಂಗ್ ಹೈಕೋರ್ಟ್ ನ್ಯಾಯಾಧೀಶರೂ ಆಗಿದ್ದರು. ಅವರನ್ನು ಮೊದಲು 2009 ರಲ್ಲಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು.

4) ಬಳಿಕ 2016 ರಲ್ಲಿ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು.

5) ಕಳೆದ ವರ್ಷ, ಮಾಜಿ ನ್ಯಾಯಾಧೀಶರು 2018 ರಲ್ಲಿ ಭ್ರಷ್ಟಾಚಾರ ವಿರೋಧಿ ಡೈನಾಮಿಕ್ ಪಕ್ಷದ (ಎಸಿಡಿಪಿ) ಅಭ್ಯರ್ಥಿಯಾಗಿ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು.

Team Newsnap
Leave a Comment
Share
Published by
Team Newsnap

Recent Posts

ಕೆ ಆರ್ ಎಸ್ ಗೆ 13 ಸಾವಿರ ಕ್ಯುಸೆಕ್ ಒಳಹರಿವು -90 ಅಡಿ ನೀರು – ಕಬಿನಿಗೆ 20 ಸಾವಿರ ಕ್ಯುಸೆಕ್ ನೀರು ಒಳ ಹರಿವು

ಮೈಸೂರು : ಕೇರಳ, ಕೊಡಗು, ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಭಾರಿ ಪ್ರಮಾಣದ… Read More

June 28, 2024

ಹಾವೇರಿ ಬಳಿ ಭೀಕರ ರಸ್ತೆ ಅಪಘಾತ: ಭದ್ರಾವತಿಯ 13 ಮಂದಿ ದುರಂತ ಸಾವು

ಹಾವೇರಿ : ದೇವಸ್ಥಾನಕ್ಕೆ ತೆರಳಿ ಸ್ವಗ್ರಾಮಕ್ಕೆ ವಾಪಸ್ಸು ಆಗುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಟಿಟಿವೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ… Read More

June 28, 2024

ರಾಜ್ಯದಲ್ಲಿ ‘ಡೇಂಘಿ’ ಜ್ವರಕ್ಕೆ ಹಾವೇರಿಯಲ್ಲಿ ಮೊದಲ ಬಲಿ

ಹಾವೇರಿ : ಡೇಂಘಿ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು ಇದೀಗ ಹಾವೇರಿ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ . ಹಾವೇರಿ ಜಿಲ್ಲೆಯ… Read More

June 27, 2024

24 ವರ್ಷದ ಯುವತಿ ಹೃದಯಾಘಾತದಿಂದ ಸಾವು

ಮಡಿಕೇರಿ : ಹೃದಯಾಘಾತದಿಂದ 24 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ… Read More

June 27, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಜೂನ್ 27 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,000 ರೂಪಾಯಿ ದಾಖಲಾಗಿದೆ. 24… Read More

June 27, 2024

Job Alert : ಕೇಂದ್ರ ಸರ್ಕಾರದಿಂದ 17,727 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ SSC CGL ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು , ಆಸಕ್ತ… Read More

June 26, 2024