November 15, 2024

Newsnap Kannada

The World at your finger tips!

WhatsApp Image 2024 09 30 at 5.40.57 PM

ಸಿದ್ದರಾಮಯ್ಯ ಬಂಧಿಸಿ ವಿಚಾರಣೆ ನಡೆಸಿ – ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಅರ್ಜಿ

Spread the love

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಂಧಿಸಿದ ನಂತರ ಲೋಕಾಯುಕ್ತ ತನಿಖೆಗೊಳಪಡಿಸಲು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದಾರೆ.

ಸ್ನೇಹಮಯಿ ಕೃಷ್ಣ ಅವರು ಸೋಮವಾರ ಮೈಸೂರಿನ ಲೋಕಾಯುಕ್ತ ಕಚೇರಿಗೆ ತೆರಳಿ, ತನಿಖೆಗೆ ಸಂಬಂಧಿಸಿದ ಮನವಿಯನ್ನು ಆಫೀಶಿಯಲ್‌ ರೀತಿಯಲ್ಲಿ ಸಲ್ಲಿಸಿದರು.

ಅಕ್ಟೋಬರ್‌ 10ರಂದು ವಾಟ್ಸಪ್‌ ಮೂಲಕ ಮನವಿ ಮಾಡಿದ ಅವರು, ಇದೀಗ ಕಚೇರಿಗೆ ಖುದ್ದಾಗಿ ಭೇಟಿ ನೀಡಿ, ಸಿದ್ದರಾಮಯ್ಯರನ್ನು ವಿಚಾರಣೆಗೊಳಪಡಿಸಲು ಮನವಿ ಮಾಡಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, “ಸಿದ್ದರಾಮಯ್ಯ ಸಾಕ್ಷಿಗಳನ್ನು ನಾಶ ಮಾಡುತ್ತಿದ್ದಾರೆ, ಪ್ರಚೋದನೆಮಯ ಭಾಷಣ ಮಾಡುತ್ತಿದ್ದಾರೆ, ಮತ್ತು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿ, ಬಂಧಿಸಬೇಕು,” ಎಂದು ವಿನಂತಿಸಿದ್ದಾರೆ.

ಇದೇ ವೇಳೆ ಅವರು, ಲೋಕಾಯುಕ್ತ ಕಚೇರಿಗೆ ಕೂಡಲೇ ಸಿಸಿಟಿವಿ ಅಳವಡಿಸುವಂತೆ ಮನವಿ ಸಲ್ಲಿಸಿದ್ದು, ಕೆಪಿಸಿಸಿ ವಕ್ತಾರರು ಪದೇ ಪದೇ ಕಚೇರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಇದ್ದೇ, ಇದರ ಮೇಲೂ ಸೂಕ್ತ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್ ವಿದಾಯ: ಕಿಚ್ಚನ ಅಧಿಕೃತ ಘೋಷಣೆ!

1985 ರಿಂದ 2010ರ ದಾಖಲೆಗಳನ್ನು ಸೀಜ್​

ಮುಡಾ ಹಗರಣದ ಮೊದಲ ಹಂತದ ತನಿಖೆ ಮುಕ್ತಾಯಗೊಂಡಿದ್ದು, 1985 ರಿಂದ 2010ರ ವರೆಗಿನ ಎಲ್ಲಾ ದಾಖಲೆಗಳನ್ನು ಲೋಕಾಯುಕ್ತವು ಸೀಜ್ ಮಾಡಿದೆ. ಕಳೆದ ವಾರ ಇಬ್ಬರು ಆರೋಪಿಗಳನ್ನು 10 ಗಂಟೆಗಳ ಕಾಲ ವಿಚಾರಣೆ ಮಾಡಿದ್ದು, ಕೆಸರೆಯ ಸರ್ವೆ ನಂ. 426ರ ಮೂರುಕಾಲು ಎಕರೆ ಭೂಮಿಯ ವಾರಸುದಾರಿಕೆ ಕುರಿತ ವಿಚಾರಣೆಯೂ ನಡೆದಿತ್ತು.

Copyright © All rights reserved Newsnap | Newsever by AF themes.
error: Content is protected !!