ಕೊಲ್ಲೂರಿನಲ್ಲಿ ಸಲಾಂ ಆರತಿಯ ವಿರುದ್ಧದ ಕೂಗಿನ ಬಳಿಕ ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವರಾಯಸ್ವಾಮಿಗೆ ಸಲ್ಲುವ ದೀವಟಿಗೆ ಸಲಾಂ ಆರತಿ ವಿರುದ್ಧ ಕೂಗು ಕೇಳಿ ಬರುತ್ತಿದೆ.
ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ಪ್ರತಿನಿತ್ಯ ಸಂಜೆ 7 ಗಂಟೆಯ ವೇಳೆಯಲ್ಲಿ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ.
ಇದು ಟಿಪ್ಪು ಸುಲ್ತಾನ್ ಆದೇಶದ ಮೇರೆಗೆ ಮಾಡುತ್ತಿರುವ ಆರತಿ ಹೀಗಾಗಿ ಈ ಆಚರಣೆಯನ್ನು ನಿಲ್ಲಿಸಬೇಕೆಂದು ಇದೀಗ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಿದ್ದಾರೆ.
ಟಿಪ್ಪು ಸುಲ್ತಾನ್ ಆಡಳಿತದ ವೇಳೆ ಆಸ್ಥಾನದಲ್ಲಿ ಆನೆಗಳ ಸರಣಿ ಸಾವು ಆಗುತ್ತಿತ್ತು. ಈ ವೇಳೆ ಟಿಪ್ಪು ಗುರುಗಳು ಚಲುವರಾಯಸ್ವಾಮಿಗೆ ಕೊಡುಗೆ ನೀಡುವುದಾಗಿ ತಿಳಿಸುತ್ತಾರೆ. ನಂತರ ಟಿಪ್ಪು ಚಲುವರಾಯಸ್ವಾಮಿಗೆ ಚಿನ್ನದ ಆಭರಣಗಳು ಹಾಗೂ ಪಾತ್ರೆಗಳನ್ನು ಉಡುಗೊರೆಯ ರೂಪದಲ್ಲಿ ನೀಡುತ್ತಾರೆ. ಈ ವೇಳೆ ಇದರ ನೆನಪಾರ್ಥ ಇಲ್ಲಿ ದೀವಟಿಗೆ ಸಲಾಂ ಆರತಿ ಮಾಡಬೇಕೆಂಬ ಸೂಚಣೆಯನ್ನು ಟಿಪ್ಪು ನೀಡಿದ್ದಾರೆ.
ಆ ಕಾರಣದಿಂದ ಸಂಧ್ಯಾರತಿಯನ್ನಾ ದೀವಟಿಗೆ ಸಲಾಂ ಆರತಿ ಎಂದು ಬದಲಾಯಿಸಿದೆ ಎಂದು ಹೇಳಾಗುತ್ತಿದೆ. ಇದಕ್ಕೆ ಯಾವುದೇ ಪುರಾವೆಗಳು ಇಲ್ಲ, ಕೇವಲ ಇತಿಹಾಸ ತಜ್ಞರು ಹಾಗೂ ಕೆಲವರು ಮಾತ್ರ ಹೇಳುತ್ತಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು