ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ಕಣ್ಣುಗಳನ್ನು ನಿನ್ನೆ ಒಬ್ಬರಿಗೆ ಮಾತ್ತು ಇಂದು ಒಬ್ಬರಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ.
ಅಪ್ಪು ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‍ಕುಮಾರ್ ಅವರು ತಂದೆ ರಾಜ್‍ಕುಮಾರ್ ಹಾದಿಯಲ್ಲೇ ಸಾಗಿದ್ದಾರೆ. ವೈದ್ಯರು ಪುನೀತ್ ಕಣ್ಣುಗಳನ್ನು ಇಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಿನ್ನೆ ಒಬ್ಬರಿಗೆ ಆಪರೇಷನ್ ಮಾಡಲಾಗಿದೆ ಮತ್ತು ಇಂದು ಮತ್ತೊಬ್ಬರಿಗೆ ಆಪರೇಷನ್ ಮಾಡಲಾಗಿದೆ. ಈ ಮೂಲಕ ಪುನೀತ್ ಅವರ ಎರಡೂ ಕಣ್ಣುಗಳ ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಸಾವಿನ ಬಳಿಕವೂ ಇಬ್ಬರ ಬಾಳಿನಲ್ಲಿ ಅಪ್ಪು ಬೆಳಕಾಗಿದ್ದಾರೆ. ನಾರಾಯಣ ನೇತ್ರಾಲಯ ವೈದ್ಯರು ಮಂಗಳವಾರ ಶಸ್ತ್ರಚಿಕಿತ್ಸೆ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ನಿಧನರಾದ ಬಳಿಕ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿತ್ತು. ಇದೀಗ ಅವರ ಕಣ್ಣುಗಳಿಂದ ಇಬ್ಬರ ಬಾಳಲ್ಲಿ ಬೆಳಕು ಮೂಡಿದೆ.
- 12 ರಾಶಿಗಳ 2025ರ ವಾರ್ಷಿಕ ಭವಿಷ್ಯ
- ಅಂಗನವಾಡಿಗೆ ತೆರಳಿದ್ದ 3 ವರ್ಷದ ಬಾಲಕಿಗೆ ಹಾವು ಕಚ್ಚಿ ದಾರುಣ ಸಾವು
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಸಂಚಾರ: ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೂಚನೆ
- ಅಪ್ಪನ ಅಕ್ಕರೆ ಮತ್ತು ತ್ಯಾಗ: ಮಗನ ನೆನಪಿನಲ್ಲಿ ಉಳಿದ ಅನನ್ಯ ಕಥೆ
- ಚಾಮರಾಜನಗರ ಬಂದ್: ಬಸ್ಗಳಿಲ್ಲದೆ ವಿದ್ಯಾರ್ಥಿಗಳ ಪರದಾಟ
More Stories
ಅಂಗನವಾಡಿಗೆ ತೆರಳಿದ್ದ 3 ವರ್ಷದ ಬಾಲಕಿಗೆ ಹಾವು ಕಚ್ಚಿ ದಾರುಣ ಸಾವು
ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಸಂಚಾರ: ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೂಚನೆ
ಚಾಮರಾಜನಗರ ಬಂದ್: ಬಸ್ಗಳಿಲ್ಲದೆ ವಿದ್ಯಾರ್ಥಿಗಳ ಪರದಾಟ