ಚೀಫ್ಸ್​ ಆಫ್ ಸ್ಟಾಪ್​ ಕಮಿಟಿ ಅಧ್ಯಕ್ಷರಾಗಿ ಜನರಲ್ MM ನರವಾಣೆ ಅಧಿಕಾರ ಸ್ವೀಕಾರ

Team Newsnap
0 Min Read

ಭಾರತೀಯ ಸೇನಾ ಪಡೆಯ ಮೂರು ವಿಭಾಗದ ಮುಖ್ಯಸ್ಥರ ಹುದ್ದೆಯಾದ ಚೀಫ್ಸ್ ಆಫ್​ ಸ್ಟಾಪ್​ ಕಮಿಟಿ ಅಧ್ಯಕ್ಷರಾಗಿ ಭೂಸೇನೆ ಮುಖ್ಯಸ್ಥ ಜನರಲ್​​.ಎಂ.ಎಂ ನರವಾಣೆ ಅಧಿಕಾರ ವಹಿಸಿಕೊಂಡರು.

ಜನರಲ್ ಬಿಪಿನ್​ ರಾವತ್​ ಸಾವಿನ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನರವಾಣೆ ನೇಮಕ ಆಗಿದ್ದಾರೆ.

ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ ಸೃಷ್ಟಿಗೂ ಮುನ್ನ ಈ ಹುದ್ದೆಯಿತ್ತು. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರ ಪೈಕಿ ಅತ್ಯಂತ ಹಿರಿಯರು ಚೀಫ್​ ಆಫ್​ ಸ್ಟಾಫ್​ ಕಮಿಟಿ ಅಧ್ಯಕ್ಷರಾಗಿ ನಿಯುಕ್ತಿಗೊಳ್ಳುತ್ತಿದ್ದರು.

ಇದೀಗ ನರವಾಣೆ ಈ ಹುದ್ದೆಗೆ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರೇ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಬಹುದು ಎನ್ನಲಾಗಿದೆ.

Share This Article
Leave a comment