January 2, 2025

Newsnap Kannada

The World at your finger tips!

pension

ನೋಂದಾಯಿತ ಕಾರ್ಮಿಕರ ಕುಟುಂಬಗಳಿಗೆ: ‘ಕುಟುಂಬ ಪಿಂಚಣಿ’ಗಾಗಿ ಅರ್ಜಿ ಆಹ್ವಾನ

Spread the love

ಬೆಂಗಳೂರು: ನೋಂದಾಯಿತ ಕಾರ್ಮಿಕರ ಪತಿ ಅಥವಾ ಪತ್ನಿಗೆ ಮಂಡಳಿಯಿಂದ ಮಾಸಿಕ ಪಿಂಚಣಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ಸೌಲಭ್ಯವನ್ನು ಪಿಂಚಣಿದಾರರು ಮಂಡಳಿಯಿಂದ ಪಿಂಚಣಿ ಪಡೆಯುತ್ತಿರುವ ಅವಧಿಯಲ್ಲಿ ಮರಣ ಹೊಂದಿದ ನಂತರ ಅವರ ಪತಿ ಅಥವಾ ಪತ್ನಿಯು ಪಡೆಯಲು ಅರ್ಹರಾಗುತ್ತಾರೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:

  • ಮಂಡಳಿಯಿಂದ ನೀಡಲ್ಪಟ್ಟ ಮೃತ ಫಲಾನುಭವಿಯ ಗುರುತಿನ ಚೀಟಿಯ ನಕಲು ಪ್ರತಿ
  • ಪಿಂಚಣಿ ಮಂಜೂರಾತಿ ಆದೇಶ
  • ರೇಷನ್ ಕಾರ್ಡ್ ಪ್ರತಿ
  • ನೋಂದಣಿದಾರರ ಆಧಾರ್ ಕಾರ್ಡ್ ಪ್ರತಿ
  • ಅವಲಂಬಿತರ ಬ್ಯಾಂಕ್ ಖಾತೆ ವಿವರ
  • ಮರಣ ಪ್ರಮಾಣ ಪತ್ರ
  • ಮೃತರ ಪತಿ ಅಥವಾ ಪತ್ನಿಯ ಆಧಾರ್ ಕಾರ್ಡ್ ಪ್ರತಿ
  • ಅವಲಂಬಿತರ ವಾಸಸ್ಥಳ ಪ್ರಮಾಣ ಪತ್ರ
  • ಅರ್ಜಿದಾರರ ಕೋರಿಕೆ ಪತ್ರ

ಇದನ್ನು ಓದಿ –ವಿಮಾನ ಪತನ: ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯ; 179 ಮಂದಿ ದುರ್ಮರಣ!

ನೋಂದಾಯಿತ ಕಾರ್ಮಿಕರ ಕುಟುಂಬಗಳು ಈ ಸೌಲಭ್ಯವನ್ನು ಪಡೆಯಲು ಅಗತ್ಯ ದಾಖಲೆಗಳನ್ನು ಸೂಕ್ತವಾಗಿ ಸಲ್ಲಿಸಲು ವಿನಂತಿ.

Copyright © All rights reserved Newsnap | Newsever by AF themes.
error: Content is protected !!