Trending

ಆ್ಯಪಲ್‌ನ ಹೊಸ ಮಿನಿ ಹೋಮ್ ಪಾಡ್- ನ. 16 ರಂದು ಲಭ್ಯ

ಆ್ಯಪಲ್ ಕಂಪನಿಯು ಹೊಸ ಮಿನಿ ಹೋಮ್ ಪಾಡ್‌ನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. , ನವೆಂಬರ್ 6ರಂದು ಆ್ಯಪಲ್ ಕಂಪನಿಯು ಈ ಪಾಡ್‌ಗಳನ್ನು ಬಿಡುಗಡೆ ಮಾಡಲಿದೆ. ನವೆಂಬರ್ 16ರಿಂದ ಮಾರುಕಟ್ಟೆಯಲ್ಲಿ, ಅಂದರೆ ಆನ್‌ಲೈನ್ ಹಾಗೂ ಆ್ಯಪಲ್‌ನ ಅಧಿಕೃತ ಮಾರಾಟಗಾರರ ಬಳಿ ಈ ಹೋಮ್ ಪಾಡ್‌ಗಳನ್ನು ಖರೀದಿಸಬಹುದಾಗಿದೆ. ಪ್ರಸ್ತುತ ಇದರ ಬೆಲೆ 9,900/-

ಆ್ಯಪಲ್ ಮಿನಿ ಹೋಮ್ ಪಾಡ್‌ನ ಬೆಲೆ ಗೂಗಲ್‌ ಹಾಗೂ ಅಮೇಜಾನ್ ಪಾಡ್‌ಗಳಿಗಿಂತಲೂ ಸ್ವಲ್ಪ ದುಬಾರಿಯಾದರೂ ಸಹ ಗುಣಮಟ್ಟದ ದೃಷ್ಠಿಯಿಂದ, ಸ್ಪಷ್ಟತೆಯ ದೃಷ್ಠಿಯಿಂದ ಇವೇ ಪಾಡ್‌ಗಳು ಜನಪ್ರಿಯವಾಗಲಿವೆ ಎನ್ನುತ್ತಾರೆ ತಜ್ಞರು. ಆ್ಯಪಲ್‌ನ ಪ್ರಮಾಣಿತ ಬಣ್ಣಗಳಾದ ಬಿಳಿ ಹಾಗೂ ಕಪ್ಪು ಬೂದು ಬಣ್ಣಗಳಲ್ಲಿ‌ ಹೊಸ ಹೋಮ್ ಪಾಡ್‌ಗಳು ಲಭ್ಯವಿವೆ.

ಏನು ವೈಶಿಷ್ಟ್ಯಗಳು?
ಹೊಸ ಮಿನಿ ಹೋಮ್ ಪಾಡ್‌ಗಳು ಗೋಳಾಕಾರದ ರಚನೆಯನ್ನು ಹೊಂದಿದೆ. 3 ಇಂಚ್ ಎತ್ತರ, 7 ಇಂಚ್ ಅಗಲ ಹೊಂದಿರಲಿದೆ. ಈ ಮೊದಲಿನ ಹೋಮ್ ಪಾಡ್‌ಗಳಲ್ಲಿನ ಇರುವ ಲವೈಶಿಷ್ಟ್ಯಗಳಾದ ಸ್ವಯಂಚಾಲಿತ ಧ್ವನಿ ಗುರುತಿಸುವಿಕೆ, ಹಾಗೂ ಮೂರನೇ ವ್ಯಕ್ತಿಯ ಸಂಗೀತ ಆಯ್ಕೆ ಮಾಡುವ ಸೇವೆಗಳನ್ನೂ ಸಹ ಈ ಪಾಡ್ ಒಳಗೊಳ್ಳಲಿದೆ. ಇವುಗಳ ಹೊರತಾಗಿ ಇನ್ನೂ ಕೆಲವು ವೈಶಿಷ್ಟ್ಯಗಳು ಇಲ್ಲಿವೆ.

  1. ಮಿನಿ ಹೋಮ್ ಪಾಡ್‌ನ್ನು ಇಂಟರ್‌ಕಾಮ್‌ನಂತೆ ಬಳಸಬಹುದು. ಮನೆಯಲ್ಲಿ‌ ಎರಡು ಅಥವಾ ಹೆಚ್ಚು ಹೋಮ್ ಪಾಡ್‌ಗಳನ್ನು ಹೊಂದಿದ್ದಲ್ಲಿ, ಒಂದು ಪಡ್‌ನಲ್ಲಿ ಸಂದೇಶವನ್ನು ರೆಕಾರ್ಡ್ ಮಾಡಿಸರೆ ಮತ್ತೊಂದು ಪಾಡ್‌ನಲ್ಲಿ ಆ ಸಂದೇಶವನ್ನು ಆಲಿಸಬಹುದಾಗಿರುತ್ತದೆ.

2.ಹೋಮ್ ಪಾಡ್‌ನ ಬ್ಯಾಕ್‌ಲಿಟ್ ಮೇಲ್ಮೈಯಲ್ಲಿ ಐಫೋನ್ ಸಂಪರ್ಕದಿಂದ ದೃಶ್ಯಗಳನ್ನೂ ಸಹ ನೋಡಬಹುದು.

  1. 360 ಡಿಗ್ರಿಯಲ್ಲಿ ಸಂಗೀತವನ್ನು ಆಲಿಸಬಹುದು. ಅಲ್ಲದೇ ಒಂದಕ್ಕಿಂತ ಹೆಚ್ಚು ಹೋಮ್ ಪಾಡ್‌ಗಳಿದ್ದಲ್ಲಿ ಒಂದಕ್ಕೊಂದನ್ನು ಸಂಪರ್ಕಿಸಿ ಸಂಗೀತ ಆಲಿಸಬಹುದು.
Team Newsnap
Leave a Comment
Share
Published by
Team Newsnap

Recent Posts

ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು : 10 ವರ್ಷದ ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ನಂಬಿಸಿ ಕಾಮುಕನೊಬ್ಬ ಅತ್ಯಾಚಾರ ಎಸೆಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ… Read More

May 20, 2024

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ : ಸಿಎಂ ಸಿದ್ದು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಪ್ಲೆಸ್ ಕ್ಲಬ್… Read More

May 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 20 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,400 ರೂಪಾಯಿ ದಾಖಲಾಗಿದೆ. 24… Read More

May 20, 2024

ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ

ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?! ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ ,… Read More

May 20, 2024

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024