ಆ್ಯಪಲ್ ಕಂಪನಿಯು ಹೊಸ ಮಿನಿ ಹೋಮ್ ಪಾಡ್‌ನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. , ನವೆಂಬರ್ 6ರಂದು ಆ್ಯಪಲ್ ಕಂಪನಿಯು ಈ ಪಾಡ್‌ಗಳನ್ನು ಬಿಡುಗಡೆ ಮಾಡಲಿದೆ. ನವೆಂಬರ್ 16ರಿಂದ ಮಾರುಕಟ್ಟೆಯಲ್ಲಿ, ಅಂದರೆ ಆನ್‌ಲೈನ್ ಹಾಗೂ ಆ್ಯಪಲ್‌ನ ಅಧಿಕೃತ ಮಾರಾಟಗಾರರ ಬಳಿ ಈ ಹೋಮ್ ಪಾಡ್‌ಗಳನ್ನು ಖರೀದಿಸಬಹುದಾಗಿದೆ. ಪ್ರಸ್ತುತ ಇದರ ಬೆಲೆ 9,900/-
ಆ್ಯಪಲ್ ಮಿನಿ ಹೋಮ್ ಪಾಡ್‌ನ ಬೆಲೆ ಗೂಗಲ್ ಹಾಗೂ ಅಮೇಜಾನ್ ಪಾಡ್‌ಗಳಿಗಿಂತಲೂ ಸ್ವಲ್ಪ ದುಬಾರಿಯಾದರೂ ಸಹ ಗುಣಮಟ್ಟದ ದೃಷ್ಠಿಯಿಂದ, ಸ್ಪಷ್ಟತೆಯ ದೃಷ್ಠಿಯಿಂದ ಇವೇ ಪಾಡ್‌ಗಳು ಜನಪ್ರಿಯವಾಗಲಿವೆ ಎನ್ನುತ್ತಾರೆ ತಜ್ಞರು. ಆ್ಯಪಲ್‌ನ ಪ್ರಮಾಣಿತ ಬಣ್ಣಗಳಾದ ಬಿಳಿ ಹಾಗೂ ಕಪ್ಪು ಬೂದು ಬಣ್ಣಗಳಲ್ಲಿ ಹೊಸ ಹೋಮ್ ಪಾಡ್‌ಗಳು ಲಭ್ಯವಿವೆ.
ಏನು ವೈಶಿಷ್ಟ್ಯಗಳು?
ಹೊಸ ಮಿನಿ ಹೋಮ್ ಪಾಡ್‌ಗಳು ಗೋಳಾಕಾರದ ರಚನೆಯನ್ನು ಹೊಂದಿದೆ. 3 ಇಂಚ್ ಎತ್ತರ, 7 ಇಂಚ್ ಅಗಲ ಹೊಂದಿರಲಿದೆ. ಈ ಮೊದಲಿನ ಹೋಮ್ ಪಾಡ್‌ಗಳಲ್ಲಿನ ಇರುವ ಲವೈಶಿಷ್ಟ್ಯಗಳಾದ ಸ್ವಯಂಚಾಲಿತ ಧ್ವನಿ ಗುರುತಿಸುವಿಕೆ, ಹಾಗೂ ಮೂರನೇ ವ್ಯಕ್ತಿಯ ಸಂಗೀತ ಆಯ್ಕೆ ಮಾಡುವ ಸೇವೆಗಳನ್ನೂ ಸಹ ಈ ಪಾಡ್ ಒಳಗೊಳ್ಳಲಿದೆ. ಇವುಗಳ ಹೊರತಾಗಿ ಇನ್ನೂ ಕೆಲವು ವೈಶಿಷ್ಟ್ಯಗಳು ಇಲ್ಲಿವೆ.
- ಮಿನಿ ಹೋಮ್ ಪಾಡ್‌ನ್ನು ಇಂಟರ್‌ಕಾಮ್‌ನಂತೆ ಬಳಸಬಹುದು. ಮನೆಯಲ್ಲಿ ಎರಡು ಅಥವಾ ಹೆಚ್ಚು ಹೋಮ್ ಪಾಡ್‌ಗಳನ್ನು ಹೊಂದಿದ್ದಲ್ಲಿ, ಒಂದು ಪಡ್‌ನಲ್ಲಿ ಸಂದೇಶವನ್ನು ರೆಕಾರ್ಡ್ ಮಾಡಿಸರೆ ಮತ್ತೊಂದು ಪಾಡ್‌ನಲ್ಲಿ ಆ ಸಂದೇಶವನ್ನು ಆಲಿಸಬಹುದಾಗಿರುತ್ತದೆ.
2.ಹೋಮ್ ಪಾಡ್‌ನ ಬ್ಯಾಕ್‌ಲಿಟ್ ಮೇಲ್ಮೈಯಲ್ಲಿ ಐಫೋನ್ ಸಂಪರ್ಕದಿಂದ ದೃಶ್ಯಗಳನ್ನೂ ಸಹ ನೋಡಬಹುದು.
- 360 ಡಿಗ್ರಿಯಲ್ಲಿ ಸಂಗೀತವನ್ನು ಆಲಿಸಬಹುದು. ಅಲ್ಲದೇ ಒಂದಕ್ಕಿಂತ ಹೆಚ್ಚು ಹೋಮ್ ಪಾಡ್‌ಗಳಿದ್ದಲ್ಲಿ ಒಂದಕ್ಕೊಂದನ್ನು ಸಂಪರ್ಕಿಸಿ ಸಂಗೀತ ಆಲಿಸಬಹುದು.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ