ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೊಳಗಾಗಿದ್ದ ನಟಿ, ನಿರೂಪಕಿ ಅನುಶ್ರೀ ನಾನು ಅಪರಾಧಿ ಅಲ್ಲ. ಯಾವ ಅಪರಾಧವನ್ನು ಮಾಡಿಲ್ಲ. ಆದರೂ ಕೂಡ ಕೆಲವು ಮಾಧ್ಯಮ ದವರು ನನ್ನನ್ನು ಬಿಂಬಿಸುವ ರೀತಿ ಮಾತ್ರ ಆಘಾತ ತಂದಿದೆ ಎಂದು ಕಣ್ಣು ತುಂಬಿಕೊಂಡು ತಮಗಾಗಿರುವ ನೋವನ್ನು ಅನುಶ್ರೀ ಹೇಳಿಕೊಂಡಿದ್ದಾರೆ.
ಫೇಸ್ಬುಕ್ ನಲ್ಲಿ ವಿಡಿಯೋ ಪ್ರಸಾರ ಮಾಡಿರು ಅನುಶ್ರೀ, ಸೆ.೧೪ ನನ್ನ ಜೀವನದ ಕರಾಳ ದಿನ. ಆ ದಿನದಿಂದಲೇ ಕೆಲವು ಮಾಧ್ಯಮ ಗಳಲ್ಲಿ ಬರುವ ಸುದ್ದಿ ನೋಡಿ ಮನೆಯವರು , ನಾನು ಸಾಕಷ್ಟು ಸೋತಿದ್ದೇವೆ. ನೊಂದಿದ್ದೇವೆ. ನನಗೆ ಕನ್ನಡದ ಜನ ನೀಡಿರುವ ಈ ಹೆಸರಿಗೆ ನಾನು ಯಾವತ್ತೂ ಕಳಂಕ ತರುವುದಿಲ್ಲ ಎಂದಿದ್ದಾರೆ.
ನನ್ನ ವಿರುದ್ಧ ಟೀಕೆ ಮಾಡಿ ಸುದ್ದಿಯನ್ನು ಪ್ರಸಾರ ಮಾಡುವ ಮುನ್ನ ಸ್ವಲ್ಪ ಯೋಚಿಸಿ’ ಎಂದು ಕೇಳಿಕೊಂಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಡ್ಯಾನ್ಸರ್ ಕಿಶನ್ ಶೆಟ್ಟಿ ವಿಚಾರಣೆ ವೇಳೆಯಲ್ಲಿ ನಟಿ, ನಿರೂಪಕಿ ಅನುಶ್ರೀ ಹೆಸರನ್ನು ಹೇಳಿದ. ಈ ಹಿನ್ನಲೆಯಲ್ಲಿ ಮಂಗಳೂರಿನ ಸಿಸಿಬಿ ಪೋಲೀಸರು ಅನುಶ್ರೀ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ನಂತರ ಅನುಶ್ರೀ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಊಹಾಪೋಹ ಸುದ್ದಿಗಳು ಬರುತ್ತವೆ
ಅನುಶ್ರೀ ವಿಚಾರಣೆಗೆ ಹಾಜರಾಗಿ ಬಂದ ನಂತರ ಅನೇಕರು ಅವರನ್ನು ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅನುಶ್ರೀ ‘ವಿಚಾರಣೆಗೆ ಹಾಜರಾದ ಮಾತ್ರಕ್ಕೆ ನಾನು ಅಪರಾಧಿಯಲ್ಲ. ಅನೇಕರು ಇದರ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಕುಟುಂಬ ನೊಂದಿದೆ. ಇನ್ನು ಮುಂದಾದರೂ ಸುದ್ದಿಗಳನ್ನು ಪ್ರಸಾರ ಮಾಡುವ ಮುನ್ನ ಯೋಚಿಸಿ’ ಎಂದು ಹೇಳಿದ್ದಾರೆ.
ನಿಮಿಷಾಂಬ ದೇವಿ ದರ್ಶನ ಮಾಡಿದ ಅನುಶ್ರೀ
ಆ್ಯಂಕರ್ ಅನುಶ್ರೀ ಶುಕ್ರವಾರ ಬೆಳಿಗ್ಗೆ ಶ್ರೀ ರಂಗಪಟ್ಟಣದ ಗಂಜಾಂಗೆ ಭೇಟಿ ನೀಡಿ ನಿಮಿಷಾಂಬ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ತಾಯಿಯೊಂದಿಗೆ ದೇವಸ್ಥಾನ ಕ್ಕೆ ಬಂದ ಅನುಶ್ರೀ ತನಗೆ ಬಂದಿರುವ ಸಂಕಷ್ಟಗಳನ್ನು ನಿವಾರಣೆ ಮಾಡುವಂತೆ ತಾಯಿಯಲ್ಲಿ ಮೊರೆ ಹೋದರು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ