ಸ್ಕ್ರೀನ್‍ನಲ್ಲಿ ಅಪ್ಪು ಬಯೋಪಿಕ್ ತೆಗೆಯುವ ಸುಳಿವು ನೀಡಿದ ನಿದೇ೯ಶಕ ಸಂತೋಷ್ ಆನಂದ್‍ರಾಮ್ .
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 3 ವಾರಗಳು ಕಳೆಯುತ್ತಿದ್ದರೂ ಅವರ ನೆನಪು ಮಾತ್ರ ಇನ್ನು ಹಸಿಯಾಗಿಯೇ ಇದೆ. ಈ ಹಿನ್ನೆಲೆ ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅವರನ್ನು ಅಪ್ಪು ಬಯೋಪಿಕ್ ತೆಗೆಯುವಂತೆ ಮನವಿ ಮಾಡಿಕೊಂಡಿದ್ದಾರೆ ರಾಮ್ ಅದಕ್ಕೆ ಒಪ್ಪಿಕೊಂಡಿದ್ದಾರೆ.
ಅಪ್ಪು ಜೊತೆ ಸಂತೋಷ್ ಆನಂದ್‍ರಾಮ್ ಅವರು ಕೆಲಸ ಮಾಡಿ ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ.
ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ. ಈ ಪರಿಣಾಮ ರಾಮ್ ಅವರು, ನಿಮ್ಮಲ್ಲಿ ಇದ್ದಂತಹ ನಿಷ್ಕಲ್ಮಶ ಮನಸ್ಸು ಮಗುವಿನಷ್ಟೇ ಚಂದ. ನಿಮ್ಮ ನಗುವಿನಲ್ಲಿ ಯಾವುದೇ ರೀತಿಯ ಅಹಂ ಇಲ್ಲ. ಅದಕ್ಕೆ ನೀವು ನಿಮ್ಮನ್ನು ಇಷ್ಟಪಡುವ ಎಲ್ಲ ಮಕ್ಕಳಲ್ಲೂ ಇದ್ದಿರಾ. ನೀವು ಇಲ್ಲ ಎಂದು ನಾನು ಎಂದೂ ಸಹ ಭಾವಿಸುವುದಿಲ್ಲ. ನಿಮಗೆ ಸಂಬಂಧ ಪಟ್ಟ ಪ್ರತಿ ಪೋಸ್ಟ್ ನಲ್ಲೂ ನಿಮ್ಮನ್ನು ಟ್ಯಾಗ್ ಮಾಡುತ್ತೇನೆ. ನೀವು ನನಗೆ ಸದಾ ಜೀವಂತ ಎಂದು ಬರೆದು ಟ್ವೀಟ್ ಮಾಡಿದ್ದರು.
ಅಪ್ಪು ಅಭಿಮಾನಿಗಳು ರಾಮ್ ಅವರಿಗೆ ಅಪ್ಪುಗೊಸ್ಕರ ಒಂದು ಒಯೋಪಿಕ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ಸಾಹದಿಂದ ಆನಂದ್‍ರಾಮ್ ಅವರು, ನಾನು ಅವರ ಬಗ್ಗೆ ತೆರೆ ಮೇಲೆ ತರಲು ನನ್ನ ಕೈಯಲ್ಲಿ ಆದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್