ಮನೀಶಾಳ ಮೇಲಿನ ಅತ್ಯಾಚಾರದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ನಡೆದ ಮತ್ತೊಂದು ಗುಂಪು ಅತ್ಯಾಚಾರ ಪ್ರಕರಣ ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿದೆ.
ಉತ್ತರ ಪ್ರದೇಶದ ಬಲರಾಮಪುರ ಎಂಬಲ್ಲಿ ಈ ಘಟನೆ ನಡೆದಿದೆ. ಶಾಹಿದ್ ಮತ್ತು ಸಾಹಿಲ್ ಎಂಬ ಇಬ್ಬರು ವ್ಯಕ್ತಿಗಳು ಹುಡುಗಿಯೊಬ್ಬಳನ್ನು ಗೆಳೆತನ ಬೆಳೆಸುವ ಕಾರಣ ಹೇಳಿಕೊಂಡು, ಯಾರೂ ಇಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ. ಅದೇ ಸ್ಥಿತಿಯಲ್ಲಿ ದುಷ್ಕರ್ಮಿಗಳು ಹುಡುಗಿಯನ್ನು ಮನೆಗೆ ಕಳುಹಿಸಿದ್ದಾರೆ.
ಹುಡುಗಿಯು ತುಂಬಾ ಬಲಹೀನಳಾದ್ದನ್ನು ಕಂಡ ಆಕೆಯ ಪೋಷಕರು ಅವಳನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಅಸುನೀಗಿದ್ದಾಳೆ.
ಈ ಬಗ್ಗೆ ಸಂತ್ರಸ್ತೆಯ ಪೋಷಕರು ಪೋಲೀಸರಿಗೆ ದೂರು ನೀಡಿದೆ. ದೂರಿನಲ್ಲಿ ಹುಡುಗಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ನಮೂದಿಸಿದ್ದರು. ದೂರಿನ ಆಧಾರದ ಮೇಲೆ ಪೋಲಿಸರು ಶಾಹಿದ್ ಮತ್ತು ಸಾಹಿಲ್‌ರನ್ನು ಬಂಧಿಸಿದ್ದಾರೆ.
ಕೇವಲ ಎರಡು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ 10ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
2019ರಲ್ಲಿ ಉನ್ನಾವೋ ಒಂದರಲ್ಲೇ 86 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಪ್ರಕಾರ 2019ರಲ್ಲಿ ರಾಷ್ಟ್ರೀಯತೆ 59,853 ಮಹಿಳಾ ದೌರ್ಜನ್ಯಗಳಾಗಿವೆ. ಪೋಕ್ಸೊ ಪ್ರಕರಣಗಳಲ್ಲಿಯೂ ಉತ್ತರ ಪ್ರದೇಶವೇ (7,444) ದೇಶದಲ್ಲಿ ಮುಂದಿದೆ
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ