2 ವರ್ಷಗಳ ಹಿಂದಿನ ಡ್ರಗ್ ಕೇಸ್ ನಲ್ಲಿ ಮತ್ತೆ ಮಾದಕ ನಟಿ ಡ್ರಗ್ಗಿಣಿ ರಾಗಿಣಿ ಪಾತ್ರ ಇದೆ ಎಂದು ಪೋಲೀಸರು ಕೇಸ್ ರೀಓಪನ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಡ್ರಗ್ಸ್ ಜಾಲದಲ್ಲಿ ಬಂಧಿತಳಾಗಿರುವ ನಟಿ ರಾಗಿಣಿ ದ್ವಿವೇದಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಬಾಣಸವಾಡಿಯಲ್ಲಿ 2018 ರಲ್ಲಿ ಪೊಲೀಸರು ಡ್ರಗ್ಸ್ ಕೇಸ್ ನಲ್ಲಿ ಪ್ರತೀಕ್ ಶೆಟ್ಟಿ ಮತ್ತು ಆದಿತ್ಯಾ ಅಗರವಾಲ್ ನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರ ಬಂದ ಪ್ರತೀಕ್ ಶೆಟ್ಟಿ ಮತ್ತೆ ಡ್ರಗ್ಸ್ ದಂಧೆ ಮಾಡತೊಡಗಿದ.
ಕಾಟನ್ ಪೇಟೆ ಪೊಲೀಸರು ಇತ್ತೀಚಿಗೆ ಪ್ರತೀಕ್ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಿದಾಗ ಡ್ರಗ್ಸ್ ಜಾಲದಲ್ಲಿ ರಾಗಿಣಿ ಆಪ್ತ ರವಿಶಂಕರ್ ಕೈವಾಡ ಇದೆ ಎಂದು ಪ್ರತೀಕ್ ಶೆಟ್ಟಿ ನೇರವಾಗಿ ಹೇಳಿದ್ದ.
ಸಿಸಿಬಿ ಪೊಲೀಸರು ರವಿಶಂಕರ್ ವಿಚಾರಣೆ ಮಾಡಿದಾಗ ಈ ವ್ಯವಹಾರದಲ್ಲಿ ರಾಗಿಣಿ ದ್ವಿವೇದಿ ಕೈವಾಡವಿದೆ ಎಂದು ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಡ್ರಗ್ಸ್ ಜಾಲದ ನಂಟು ಬೆಳೆಯುತ್ತಿದೆ.
2018 ರ ಬಾಣಸವಾಡಿ ಕೇಸ್ ನಲ್ಲಿ ರಾಗಿಣಿ ಇದ್ದಾಳೆ ಎಂಬುದನ್ನು ಸಿಸಿಬಿ ಪೋಲಿಸರು ಸಾಬೀತು ಮಾಡಲು ಹೊರಟಿದ್ದಾರೆ.
ಜಾಮೀನಿಗಾಗಿ ರಾಗಿಣಿ ಅಪ್ಪ, ಅಮ್ಮ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟ್ ರಾಗಿಣಿಗೆ ಜಾಮೀನು ನೀಡಿದರೂ, ಬಾಣಸವಾಡಿ ಕೇಸ್ ನಲ್ಲಿ ಪೊಲೀಸರು ಮತ್ತೆ ರಾಗಿಣಿಯನ್ನು ಜೈಲಿಗೆ ಕಳುಹಿಸುವ ತಂತ್ರ ಗಳು ಮಾತ್ರ ನಡೆಯುತ್ತಿವೆ.
ರಾಗಿಣಿಯಂತೂ ಜೈಲಿನಲ್ಲೇ ಜಾತಕ ಪಕ್ಷಿಯಂತೆ ಜಾಮೀನಿಗಾಗಿ ಕಾದು ಕುಳಿತಿದ್ದಾರೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ