December 27, 2024

Newsnap Kannada

The World at your finger tips!

balamuri

ವರ್ಷಾಚರಣೆಗೆ ಬ್ರೇಕ್ : ಮಂಡ್ಯ ಪ್ರಮುಖ ಪ್ರವಾಸಿ ತಾಣಗಳು ಎರಡು ದಿನ ಬಂದ್, ನಿಷೇದಾಜ್ಙೆ ಜಾರಿ

Spread the love

ಮಂಡ್ಯ ಜಿಲ್ಲೆಯ ಬಲಮುರಿ, ಎಡಮುರಿ , ಮುತ್ತತ್ತಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಎರಡು ದಿನಗಳ ನಿಷೇದಾಜ್ಙೆ ಜಾರಿ ಮಾಡಲಾಗಿದೆ.

ಈ ಕುರಿತಂತೆ ಮಂಡ್ಯ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿರುವ ಜಿಲ್ಲಾಡಳಿತ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶ ಕ್ಕೆ ನಿರ್ಬಂಧ ಹೇರಿ , ಡಿ. 31 ಹಾಗೂ ಜ. 1 ರಂದು ಆ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಎಡಮುರಿ‌, ಬಲಮುರಿ , ಕೆ ಆರ್ ಎಸ್ ನ ಹಿನ್ನೀರಿ ಪ್ರದೇಶ , ಮಳವಳ್ಳಿ ತಾಲೂಕಿನ ಮುತ್ತತ್ತಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ವರ್ಷಾಚರಣೆಗೆ ಬ್ರೇಕ್ ಹಾಕಿ, ಸಂಭ್ರಮ ಕ್ಕೆ ಕಡಿವಾಣ ಹಾಕುವ ಮೂಲಕ ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯುವ ಉದ್ದೇಶಕ್ಕಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Copyright © All rights reserved Newsnap | Newsever by AF themes.
error: Content is protected !!