ಇಂದು ವಿಮಾನ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯ ಕಕ್ಷೆಯಿಂದ 23,80,000 ಮೈಲುಗಳ ದೂರದಿಂದ ಹಾದುಹೋಗಲಿದೆ ಎಂದು ನಾಸಾ ಹೇಳಿದೆ.
ಈ ಕ್ಷುದ್ರಗ್ರಹವನ್ನು 2020RK2 ಎಂದು ವಿಜ್ಞಾನಿಗಳು ಹೆಸರಿಸಿದ್ದಾರೆ. 15 ದಿನಗಳ ಅಂತರದಲ್ಲಿ ಭೂಮಿಯ ಹತ್ತಿರದಿಂದ ಹಾದುಹೋಗುತ್ತಿರುವ 2 ನೇ ಕ್ಷುದ್ರಗ್ರಹ ಇದಾಗಿದೆ.
ಸೆಪ್ಟೆಂಬರ್ 24 ರಂದು 2020SW ಎಂಬ ಹೆಸರಿನ ಬಸ್ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯ ಕಕ್ಷೆಯಿಂದ 13,000 ಮೈಲುಗಳ ಅಂತರದಲ್ಲಿ ಹಾದುಹೋಗಿತ್ತು ಎಂದು ಹೇಳುತ್ತಾರೆ ನಾಸಾ ವಿಜ್ಞಾನಿಗಳು.
ಪ್ರಸ್ತುತ ಭೂ ಕಕ್ಷೆಯ ಸಮೀಪದಿಂದ ಹಾದುಹೋಗಲಿರುವ ಕಕ್ಷೆಯಿಂದ ಭೂಮಿಗೆ ಯಾವುದೇ ಅಪಾಯವಿಲ್ಲವೆಂದು ವಿಜ್ಞಾನಿಗಳು ತಿಳಿಸಿದ್ದಾರೆ.
More Stories
ವಿಮಾನ ಪತನ: ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯ; 179 ಮಂದಿ ದುರ್ಮರಣ!
2025ನೇ ಸಾಲಿನ ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ 32,000ಕ್ಕೂ ಹೆಚ್ಚು ನೇಮಕಾತಿ
ವಿಚಾರ ಕ್ರಾಂತಿಯ ಯುಗಪುರುಷ ಕುವೆಂಪು