ಅಮೆರಿಕಾ ಶ್ವೇತಭವನ ದಲ್ಲಿ ಕಮಲ! ಇಡ್ಲಿ- ಸಾಂಬಾರ್, ಮೊಸರನ್ನ ಪ್ರಿಯೆ

Team Newsnap
2 Min Read

ಜೋಸೆಫ್​ ಬಿಡೆನ್​ ಅಮೆರಿಕ ಅಧ್ಯಕ್ಷರಾಗುತ್ತಿದ್ದಂತೆ ಕಮಲ ಹ್ಯಾರಿಸ್​ ಉಪಾಧ್ಯಕ್ಷರಾಗಿದ್ದಾರೆ. ಈ ಮೂಲಕ ಶ್ವೇತಭವನದಲ್ಲಿ ಭಾರತದ ಕಮಲ ಅರಳಿದಂತಾಗಿದೆ. ಉನ್ನತ ಹುದ್ದೆಗೆ ಪ್ರವೇಶ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕಮಲ ಅವರಾಗಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಏಷ್ಯಾನ್​ ಅಮೆರಿಕನ್​ ಮಹಿಳೆ. ಕ್ಯಾಲಿಫೋರ್ನಿಯಾದ ಸೆನೆಟರ್​ ಆಗಿರುವ ಹ್ಯಾರಿಸ್​, ಈ ಮೊದಲು ಸ್ಯಾನ್​ಫ್ರಾನ್ಲಸಿಸ್ಕೋದಲ್ಲಿ ವಕೀಲರಾಗಿದ್ದರು. ಅಲ್ಲದೇ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್​ ಆಗಿ ಕೂಡ ಸೇವೆ ಸಲ್ಲಿಸಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಈಕೆಯದು.

ಕಮಲ ಮೂಲ ಎಲ್ಲಿಯದು?

ಭಾರತೀಯ ಮೂಲದ ಕಮಲ ಹ್ಯಾರಿಸ್​ ಶ್ವೇತಭವನ ಪ್ರವೇಶ ಭಾರತೀಯರಲ್ಲಿಯೂ ಸಂತಸ ತಂದಿದೆ. ಹ್ಯಾರಿಸ್​ ತಾಯಿ ಭಾರತೀಯರಾದರೆ, ತಂದೆ ಜಮೈಕಾದವರು. ಇವರಿಬ್ಬರು ಹಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ವಾಸ್ತವ್ಯ ಆರಂಭಿಸಿದ್ದರು.

ಇಡ್ಲಿ ಸಾಂಬಾರ್, ಮೊಸರನ್ನ ಪ್ರಿಯೆ

ಕಮಲಾ ಭಾರತದ ಮೊಸರನ್ನ, ದಾಲ್ , ಪೊಟ್ಯಾಟೋ ಕರಿ, ಇಡ್ಲಿ ತಿಂದು ದೊಡ್ಡವರಾದವರು.  ಕೆಲ ವರ್ಷಗಳ ಹಿಂದೆ ಚೆನ್ನೈ ಗೆ ಭೇಟಿ ನೀಡಿ ತಮ್ಮ ಅಜ್ಜಿ-ಅಜ್ಜನ ಮಾತನಾಡಿಸಿಕೊಂಡು ಹೋಗಿದ್ದರು. ಈ ಎಲ್ಲಾ ಸಂಗತಿ ಗಳನ್ನು ಸಂದರ್ಶನವೊಂದರಲ್ಲಿ ದಕ್ಷಿಣ ಭಾರತದ ಆಹಾರದ ಬಗ್ಗೆ ಹೇಳಿಕೊಂಡಿದ್ದರು.

ತಾಯಿಯಿಂದ ಭಾರತೀಯ ಪರಂಪರೆಯ ಅನೇಕ ಅಂಶಗಳನ್ನು ಆಕೆ ಕಲಿತುಕೊಂಡಿದ್ದಾರೆ. ಉಪಾಧ್ಯಕ್ಷ ಸ್ಪರ್ಧೆಗೆ ಆಯ್ಕೆಯಾದ ಮೊದಲ ಕಪ್ಪು ಮಹಿಳೆ (ಕಮಲಾ ತಂದೆ ಜಮೈಕಾ ಮೂಲದವರು) ಮೊದಲ ಭಾರತೀಯ ಸಂಜಾತೆ ಎನ್ನುವುದು ಹೆಮ್ಮೆ.

ಕಮಲಾ ತಾಯಿ ಶ್ಯಾಮಲಾ ಚೆನ್ನೈನಲ್ಲಿ ಜನಿಸಿದವರು. ಕ್ಯಾನ್ಸರ್ ಸಂಶೋಧಕಿ ಯಾಗಿ ಅಮೆರಿಕ್ಕೆ ತೆರಳಿದ್ದರು.

ಈ ಹಿಂದೆ ಕಳೆದ ಬಾರಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟು ಕಮಲಾ ಹ್ಯಾರಿಸ್ ಪ್ರಚಾರವನ್ನು ಆರಂಭಿಸಿದ್ದರು. ನಂತರ ತಮ್ಮ ಪ್ರಚಾರವನ್ನು ಮುಂದುವರಿಸಲು ಹಣಕಾಸಿನ ಕೊರತೆಯಿದೆ ಎಂದು ಸ್ಪರ್ಧೆಯಿಂದ ಹಿಂದೆ ಸರಿದರು. ಅಮೆರಿಕ ಸೆನೆಟ್ ನಲ್ಲಿರುವ ಮೂವರು ಏಷ್ಯಾ ಅಮೆರಿಕನ್ ಮಹಿಳೆಯರಲ್ಲಿ ಕಮಲಾ ಹ್ಯಾರಿಸ್ ಒಬ್ಬರಾಗಿದ್ದಾರೆ .

ಸಾಮಾಜಿಕ  ಜೀವನದಲ್ಲಿ, ಆಡಳಿತದಲ್ಲಿ ಪಳಗಿದವರು ಕಮಲಾ ಹ್ಯಾರಿಸ್. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜಿಲ್ಲಾ ಅಟಾರ್ನಿಯಾಗಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ ಅಮೆರಿಕನ್ ಮತ್ತು ಭಾರತೀಯ ಮೂಲದ ಮಹಿಳೆ.

ಆಗಸ್ಟ್​ನಲ್ಲಿ ಬಿಡೆನ್​ , ಕಮಲ ಹ್ಯಾರಿಸ್​ ಅವರನ್ನು ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ ನಿಯೋಜಿಸಿದ್ದರು. ಅಲ್ಲದೇ ತಮ್ಮ ನಿರ್ಣಾಯಕ ಪಾಲುದಾರರನ್ನಾಗಿ ಮಾಡಿಕೊಂಡಿದ್ದರು. ಬಿಡೆನ್​ ವಿಜಯದಲ್ಲಿ ಹ್ಯಾರಿಸ್​ ಪಾತ್ರ ಕೂಡ ಬಹಳಷ್ಟಿದೆ. ಮಹಿಳೆಯರು ಮತ್ತು ಕಪ್ಪು ವರ್ಣಿಯರನ್ನು ಸೆಳೆಯುವಲ್ಲಿ ಹ್ಯಾರಿಸ್​ ಪ್ರಮುಖ ಪಾತ್ರವಹಿಸಿದರು.

ಚುನಾವಣೆ ವಂಚನೆ ಕುರಿತು ಟ್ರಂಪ್​ ಆರೋಪಿಸುತ್ತಿದ್ದಂತೆ ತಿರುಗೇಟು ನೀಡಿದ ಹ್ಯಾರಿಸ್​, ನಮ್ಮ ಚುನಾವಣಾ ಪ್ರಕ್ರಿಯೆ ಮೇಲೆ ನಂಬಿಕೆ ಹೊಂದಿದ್ದರಿಂದಲೇ ಮೊದಲ ದಿನವೇ 100 ಮಿಲಿಯನ್​ ಅಮೆರಿಕನ್ನರು ಮತಚಲಾಯಿಸಿದರು. ಆದರೆ, ಟ್ರಂಪ್​ ಈ ಮತಗಳನ್ನು ಅಮಾನ್ಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಮತ್ತೆ ಹೋರಾಡಬೇಕು. ಇದಕ್ಕೆ ಅಮರಿಕನ್ನರ ಬೆಂಬಲಬೇಕು ಎಂದು ಟ್ವೀಟ್​ ಮಾಡಿದ್ದರು.

ಪ್ರಚಾರದ ಅಂತಿಮ ದಿನಗಳಲ್ಲಿಯೂ ಜಾರ್ಜಿಯಾ, ನಾರ್ಥ್​ ಕರೊಲಿನಾ, ಪೆನ್ಸಿಲ್ವೇನಿಯಾ ಮತ್ತು ಫ್ಲೋರಿಡಾಗಳಲ್ಲಿ ಬಹಳಷ್ಟು ಹೋರಾಟ ನಡೆಸಿದರು. ಭಾರತೀಯ ಅಮೆರಿಕನ್​ ಸಮುದಾಯವನ್ನು ಸೆಳೆಯುವಲ್ಲಿ ಇವರು ಬಹಳ ಮುಖ್ಯಪಾತ್ರಹಿಸಿದರು. ಅಲ್ಲದೇ ನಿಧಿ ಸಂಗ್ರಹಣೆಯಲ್ಲಿಯೂ ಬಿಡೆನ್​ಗೆ ಬೆಂಬಲವಾಗಿ ನಿಂತರು.

Share This Article
Leave a comment