Trending

ಅಮೆರಿಕ ಚುನಾವಣೆ: ಬಹುಮತದತ್ತ ಬೈಡನ್; ವಿಸ್ಕಾನ್ಸಿನ್​ನಲ್ಲಿ ಮರು ಎಣಿಕೆಗೆ ಟ್ರಂಪ್ ಒತ್ತಾಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಮುಗಿದು ಹೆಚ್ಚೂ ಕಡಿಮೆ 20 ಗಂಟೆ ಗತಿಸಿದರೂ ಪೂರ್ಣ ಫಲಿತಾಂಶ ಪ್ರಕಟವಾಗಿಲ್ಲ. ಅಮೆರಿಕದ 50 ರಾಜ್ಯಗಳ ಪೈಕಿ ಇನ್ನೂ ಏಳೆಂಟು ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ಮುಗಿದಿಲ್ಲ.

ಈ ಐವತ್ತು ರಾಜ್ಯಗಳಿಂದ ಒಟ್ಟು 538 ಎಲೆಕ್ಟೋರೇಟ್​ಗಳ ಆಯ್ಕೆ ಆಗಬೇಕಿದೆ. ಇದರಲ್ಲಿ ಒಂದು ಪಕ್ಷ ಬಹುಮತ ಪಡೆಯಲು 270 ಎಲೆಕ್ಟೋರೇಟ್​ಗಳ ಆಯ್ಕೆ ಆಗಬೇಕು. ಕೆಲ ಗಂಟೆಗಳ ಹಿಂದಿನ ಫಲಿತಾಂಶದಂತೆ ಬೈಡನ್ ಅವರ ಡೆಮಾಕ್ರಾಟಿಕ್ ಪಕ್ಷ 227 ಹಾಗೂ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ 213 ಎಲೆಕ್ಟೋರಲ್ ವೋಟ್​ಗಳನ್ನ ಪಡೆದಿದೆ. ಇನ್ನೂ 98 ಎಲೆಕ್ಟೋರಲ್ ವೋಟ್​ಗಳ ಆಯ್ಕೆ ಆಗಬೇಕಿದೆ. ಈ ಮೂಲಕ ಟ್ರಂಪ್​ಗಿಂತ ಬೈಡನ್ ತುಸು ಮೇಲುಗೈ ಹೊಂದಿದ್ದಾರೆ.

ಅಲಾಸ್ಕಾ, ಆರಿಜೋನಾ, ಜಾರ್ಜಿಯಾ, ಮೈನೆ, ಮಿಷಿಗನ್, ನೆವಾಡ, ನಾರ್ತ್ ಕರೋಲಿನಾ, ಪೆನ್​ಸಿಲ್ವೇನಿಯಾ, ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಫಲಿತಾಂಶ ಇನ್ನೂ ಪೂರ್ಣ ಪ್ರಕಟವಾಗಿಲ್ಲ. ಈ ಒಂಬತ್ತು ರಾಜ್ಯಗಳಲ್ಲಿ ಟ್ರಂಪ್ ಐದು ರಾಜ್ಯಗಳಲ್ಲಿ ಮುನ್ನಡೆ ಹೊಂದಿದ್ಧಾರೆ. ಬೈಡನ್ ಅವರು ಅರಿಜೋನಾದಲ್ಲಿ ದೊಡ್ಡ ಮೇಲುಗೈ ಸಾಧಿಸಿದ್ದಾರೆ.

ಆದರೆ, ಎಲ್ಲರ ಕಣ್ಣುಕುಕ್ಕಿರುವುದು ವಿಸ್ಕಾನ್ಸಿನ್ ಮತ್ತು ಮಿಷಿಗನ್ ರಾಜ್ಯಗಳ ಮತ ಎಣಿಕೆ ಕಾರ್ಯ. ಇವೆರಡು ರಾಜ್ಯಗಳು ಹಾಗೂ ಪೆನ್​ಸಿಲ್ವೇನಿಯಾದಲ್ಲಿ ಚುನಾವಣಾ ಆಕ್ರಮಗಳು ನಡೆದಿವೆ ಎಂದು ಟ್ರಂಪ್ ದೂರಿದ್ದಾರೆ. ಮಿಷಿಗನ್ ಮತ್ತು ಪೆನ್​ಸಿಲ್ವೇನಿಯಾ ರಾಜ್ಯಗಳ ಚುನಾವಣೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಟ್ರಂಪ್ ನಿರ್ಧರಿಸುವ ಸಾಧ್ಯತೆ ಇದೆ. ಹಾಗೆಯೇ, ವಿಸ್ಕಾನ್ಸಿನ್ ರಾಜ್ಯದ ಚುನಾವಣೆಯ ಮರು ಮತ ಎಣಿಕೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024