ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಮುಗಿದು ಹೆಚ್ಚೂ ಕಡಿಮೆ 20 ಗಂಟೆ ಗತಿಸಿದರೂ ಪೂರ್ಣ ಫಲಿತಾಂಶ ಪ್ರಕಟವಾಗಿಲ್ಲ. ಅಮೆರಿಕದ 50 ರಾಜ್ಯಗಳ ಪೈಕಿ ಇನ್ನೂ ಏಳೆಂಟು ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ಮುಗಿದಿಲ್ಲ.
ಈ ಐವತ್ತು ರಾಜ್ಯಗಳಿಂದ ಒಟ್ಟು 538 ಎಲೆಕ್ಟೋರೇಟ್ಗಳ ಆಯ್ಕೆ ಆಗಬೇಕಿದೆ. ಇದರಲ್ಲಿ ಒಂದು ಪಕ್ಷ ಬಹುಮತ ಪಡೆಯಲು 270 ಎಲೆಕ್ಟೋರೇಟ್ಗಳ ಆಯ್ಕೆ ಆಗಬೇಕು. ಕೆಲ ಗಂಟೆಗಳ ಹಿಂದಿನ ಫಲಿತಾಂಶದಂತೆ ಬೈಡನ್ ಅವರ ಡೆಮಾಕ್ರಾಟಿಕ್ ಪಕ್ಷ 227 ಹಾಗೂ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ 213 ಎಲೆಕ್ಟೋರಲ್ ವೋಟ್ಗಳನ್ನ ಪಡೆದಿದೆ. ಇನ್ನೂ 98 ಎಲೆಕ್ಟೋರಲ್ ವೋಟ್ಗಳ ಆಯ್ಕೆ ಆಗಬೇಕಿದೆ. ಈ ಮೂಲಕ ಟ್ರಂಪ್ಗಿಂತ ಬೈಡನ್ ತುಸು ಮೇಲುಗೈ ಹೊಂದಿದ್ದಾರೆ.
ಅಲಾಸ್ಕಾ, ಆರಿಜೋನಾ, ಜಾರ್ಜಿಯಾ, ಮೈನೆ, ಮಿಷಿಗನ್, ನೆವಾಡ, ನಾರ್ತ್ ಕರೋಲಿನಾ, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಫಲಿತಾಂಶ ಇನ್ನೂ ಪೂರ್ಣ ಪ್ರಕಟವಾಗಿಲ್ಲ. ಈ ಒಂಬತ್ತು ರಾಜ್ಯಗಳಲ್ಲಿ ಟ್ರಂಪ್ ಐದು ರಾಜ್ಯಗಳಲ್ಲಿ ಮುನ್ನಡೆ ಹೊಂದಿದ್ಧಾರೆ. ಬೈಡನ್ ಅವರು ಅರಿಜೋನಾದಲ್ಲಿ ದೊಡ್ಡ ಮೇಲುಗೈ ಸಾಧಿಸಿದ್ದಾರೆ.
ಆದರೆ, ಎಲ್ಲರ ಕಣ್ಣುಕುಕ್ಕಿರುವುದು ವಿಸ್ಕಾನ್ಸಿನ್ ಮತ್ತು ಮಿಷಿಗನ್ ರಾಜ್ಯಗಳ ಮತ ಎಣಿಕೆ ಕಾರ್ಯ. ಇವೆರಡು ರಾಜ್ಯಗಳು ಹಾಗೂ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಆಕ್ರಮಗಳು ನಡೆದಿವೆ ಎಂದು ಟ್ರಂಪ್ ದೂರಿದ್ದಾರೆ. ಮಿಷಿಗನ್ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳ ಚುನಾವಣೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಟ್ರಂಪ್ ನಿರ್ಧರಿಸುವ ಸಾಧ್ಯತೆ ಇದೆ. ಹಾಗೆಯೇ, ವಿಸ್ಕಾನ್ಸಿನ್ ರಾಜ್ಯದ ಚುನಾವಣೆಯ ಮರು ಮತ ಎಣಿಕೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ